ಬೆತೆಲ್ ಭೇಟಿ ಮಾಡುವುದರ ಕುರಿತ ಮಾಹಿತಿ
ನಮ್ಮ ಬ್ರಾಂಚ್ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.
Tours Resumed: In many countries, we resumed tours of our branch offices on June 1, 2023. For details, contact the branch you would like to tour. Please do not visit if you test positive for COVID-19, display cold or flu-like symptoms, or have recently been exposed to someone who tested positive for COVID-19.
ಅಮೆರಿಕ
ಈ ಪುಟದಲ್ಲಿ
ಟೂರ್ ಮಾಹಿತಿ
ಪ್ರದರ್ಶನ
ವಾರ್ವಿಕ್ ಸೆಲ್ಫ್ ಟೂರ್ ಪ್ರದರ್ಶನ
ದ ಬೈಬಲ್ ಆ್ಯಂಡ್ ದ ಡಿವೈನ್ ನೇಮ್. ಈ ಪ್ರದರ್ಶನದಲ್ಲಿ ಅಪರೂಪವಾದ ಬೈಬಲ್‌ಗಳನ್ನು ಮತ್ತು ಯೆಹೋವ ದೇವರ ಹೆಸರನ್ನು ಬೈಬಲಿನಿಂದ ಅಳಿಸಲು ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದ್ರೂ ದೇವರು ಅದನ್ನು ಹೇಗೆ ಕಾಪಾಡಿದರು ಅನ್ನೋದನ್ನು ನೋಡಬಹುದು. ಇದ್ರಲ್ಲೇ ಇರೋ ಇನ್ನೊಂದು ವಿಶೇಷ ಗ್ಯಾಲರಿಯಲ್ಲಿ ಅಪರೂಪವಾದ ಬೈಬಲ್‌ಗಳನ್ನು ಮತ್ತು ಬೈಬಲ್ ಕಾಲದ ವಸ್ತುಗಳನ್ನು ಇಡಲಾಗಿದೆ.
ಎ ಪೀಪಲ್ ಫಾರ್ ಜೆಹೋವಾಸ್ ನೇಮ್. ಈ ಪ್ರದರ್ಶನದಲ್ಲಿ ಯೆಹೋವನ ಸಾಕ್ಷಿಗಳ ಇತಿಹಾಸದ ಕಿರುನೋಟದ ಜೊತೆಗೆ ಕಲಾಕೃತಿಗಳನ್ನು, ಗ್ರಾಫಿಕ್‌ಗಳನ್ನು ನೋಡಬಹುದು. ಯೆಹೋವನು ಮೊದಲಿನಿಂದಲೂ ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಾ ಕಲಿಸುತ್ತಾ ವ್ಯವಸ್ಥಿತವಾಗಿ ನಡೆಸುತ್ತಾ ಇದ್ದಾನೆ ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷ್ಯಗಳನ್ನು ನೋಡಬಹುದು.
ಮುಖ್ಯ ಕಾರ್ಯಾಲಯ—ಫೇತ್ ಇನ್ ಆ್ಯಕ್ಷನ್. ಈ ಕುತೂಹಲಕಾರಿ ಪ್ರದರ್ಶನದಲ್ಲಿ ಆಡಳಿತ ಮಂಡಲಿಯ ಕಮಿಟಿಗಳು ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿವೆ ಮತ್ತು ಸಭೆಯಾಗಿ ಸೇರಿ ಬರಲು, ಶಿಷ್ಯರನ್ನಾಗಿ ಮಾಡಲು, ಆಧ್ಯಾತ್ಮಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಲು, ಒಬ್ಬರನ್ನೊಬ್ಬರು ಪ್ರೀತಿಸಲು ಯೆಹೋವನ ಸಾಕ್ಷಿಗಳಿಗೆ ಹೇಗೆ ಮಾರ್ಗದರ್ಶನ ಕೊಡುತ್ತವೆ ಅನ್ನೋದನ್ನು ವಿವರಿಸುತ್ತೆ.
ಪ್ಯಾಟರ್‌ಸನ್ ಸೆಲ್ಫ್ ಟೂರ್ ಪ್ರದರ್ಶನ
ಬೈಬಲಲ್ಲಿರೋ ಒಂದನೇ ಶತಮಾನದ ಹಳ್ಳಿಗಳು. ಯೇಸು ಭೂಮಿಲಿ ಇದ್ದಾಗ ಜೀವನ ಹೇಗಿತ್ತು ಅಂತ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ? ಇಲ್ಲಿ ನೀವು ಒಂದನೇ ಶತಮಾನದಲ್ಲಿದ್ದ ಹಳ್ಳಿಗಳಲ್ಲಿ ಜೀವನ ಹೇಗಿತ್ತು ಅಂತ ನೋಡಬಹುದು ಮತ್ತು ಅದ್ರಲ್ಲಿ ನೀವು ಭಾಗವಹಿಸಬಹುದು. ಬೈಬಲ್‌ನ ಓದಿ ಇನ್ನೂ ಚೆನ್ನಾಗಿ ಅರ್ಥಮಾಡ್ಕೊಳಕ್ಕೆ ಈ ಪ್ರದರ್ಶನ ನಿಮಗೆ ಸಹಾಯ ಮಾಡುತ್ತೆ.
ಬೈಬಲಲ್ಲಿರೋ ಒಂದನೇ ಶತಮಾನದ ನಾಣ್ಯಗಳು. ಒಂದನೇ ಶತಮಾನದಲ್ಲಿ ಬಳಸ್ತಿದ್ದ ನಾಣ್ಯಗಳನ್ನ ಇಲ್ಲಿ ಪ್ರದರ್ಶಿಸಿದ್ದಾರೆ. ಈ ನಾಣ್ಯಗಳ ಬಗ್ಗೆ ಕ್ರೈಸ್ತ ಗ್ರೀಕ್ ಪುಸ್ತಕಗಳಲ್ಲಿದೆ. ಈ ಪ್ರದರ್ಶನದಲ್ಲಿ ಒಂದೊಂದು ನಾಣ್ಯದ ಬಗ್ಗೆನೂ ಆಸಕ್ತಿ ಹುಟ್ಟಿಸೋ ವಿವರಗಳಿವೆ ಮತ್ತು ಅವು ಬೈಬಲಲ್ಲಿ ಹೇಳಿರೋ ಘಟನೆಗಳಿಗೆ ಹೇಗೆ ಸಂಬಂಧಿಸಿದೆ ಅನ್ನೋ ವಿವರಣೆ ಕೂಡ ಇದೆ.
“ನಿನ್ನ ಮಕ್ಕಳೆಲ್ಲ ಯೆಹೋವನಿಂದ ಕಲಿತಾರೆ.” ನಮ್ಮ ಸಂಘಟನೆ ನಡಿಸೋ ಶಾಲೆಗಳ ಮತ್ತು ತರಬೇತಿ ಕಾರ್ಯಕ್ರಮಗಳ ಇತಿಹಾಸವನ್ನ ಈ ಪ್ರದರ್ಶನ ತೋರಿಸುತ್ತೆ. ಈ ಶಾಲೆಗಳು ಎಷ್ಟೋ ಸ್ವಯಂಸೇವಕರಿಗೆ ಬೈಬಲನ್ನ ಚೆನ್ನಾಗಿ ಕಲಿಸೋಕೆ ಮತ್ತು ಸಭೆಯಲ್ಲಿ ಒಳ್ಳೇ ಹಿರಿಯರಾಗೋಕೆ ಹೇಗೆ ಸಹಾಯ ಮಾಡಿವೆ ಅಂತ ತಿಳ್ಕೊಳ್ಳಿ.
“ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು.” ಎಷ್ಟೇ ವಿರೋಧ ಇದ್ರೂ ತಮ್ಮ ನಂಬಿಕೆಯನ್ನ ಬಿಟ್ಟುಕೊಡದೆ ಇದ್ದ ಯೆಹೋವನ ಸಾಕ್ಷಿಗಳ ಬಗ್ಗೆ ಈ ಪ್ರದರ್ಶನದಲ್ಲಿದೆ. ಇಡೀ ಪ್ರಪಂಚದಲ್ಲಿ ಸಿಹಿಸುದ್ದಿ ಸಾರೋಕೆ ನಮ್ಮ ಸಂಘಟನೆ ಕಾನೂನಿಂದ ಹೇಗೆ ಅನುಮತಿ ಪಡ್ಕೊಂಡಿದೆ ಅಂತ ಇಲ್ಲಿ ನೋಡಿ.