ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒತ್ತಡದಿಂದ ಹೊರಗೆ ಬನ್ನಿ

ಒತ್ತಡ ಅಂದರೇನು?

ಒತ್ತಡ ಅಂದರೇನು?

ಕಷ್ಟದ ಸನ್ನಿವೇಶಗಳಲ್ಲಿ ನಮ್ಮ ದೇಹ ಪ್ರತಿಕ್ರಿಯಿಸುವ ರೀತೀನೇ ಒತ್ತಡ. ಆ ಸಮಯದಲ್ಲಿ ಮೆದುಳು ದೇಹದ ಎಲ್ಲಾ ಭಾಗಗಳಿಗೆ ಹಾರ್ಮೋನ್‌ಗಳು ಬಿಡುಗಡೆ ಆಗುವ ಹಾಗೆ ಮಾಡುತ್ತೆ. ಈ ಹಾರ್ಮೋನ್‌ಗಳು ನಿಮ್ಮ ಹೃದಯ ಬಡಿತ, ರಕ್ತದ ಒತ್ತಡ, ಉಸಿರಾಟದ ವೇಗವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಸ್ನಾಯುಗಳನ್ನು ಬಿಗಿ ಮಾಡುತ್ತವೆ. ನಿಮಗೆ ಏನಾಗುತ್ತಿದೆ ಅಂತ ಗೊತ್ತಾಗೋ ಮುಂಚೆನೇ ನಿಮ್ಮ ದೇಹ ಪ್ರತಿಕ್ರಿಯಿಸಲು ಶುರು ಮಾಡಿರುತ್ತೆ. ಒಂದು ಕಷ್ಟದ ಸನ್ನಿವೇಶ ಮುಗಿದ ಮೇಲೆ ನಿಮ್ಮ ದೇಹ ಒತ್ತಡದ ಸ್ಥಿತಿಯಿಂದ ಮೊದಲಿದ್ದ ಸ್ಥಿತಿಗೆ ಬರುತ್ತೆ.

ಪ್ರಯೋಜನಕರ ಮತ್ತು ಹಾನಿಕರ ಒತ್ತಡ

ಕಷ್ಟಕರ ಮತ್ತು ಅಪಾಯಕರ ಸನ್ನಿವೇಶಗಳನ್ನು ನಿಭಾಯಿಸಲು ಒತ್ತಡ ಸಹಾಯ ಮಾಡುತ್ತೆ. ಈ ಪ್ರತಿಕ್ರಿಯೆ ಮೊದಲು ಮೆದುಳಲ್ಲಿ ಶುರು ಆಗುತ್ತೆ. ಇದರಿಂದ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ. ಇಂಥ ಒತ್ತಡ ಖಂಡಿತ ಪ್ರಯೋಜನಕರ. ಯಾಕಂದ್ರೆ ಇದು ನಮ್ಮ ಗುರಿಗಳನ್ನು ಮುಟ್ಟಲು, ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಲು, ಕ್ರೀಡೆಗಳಲ್ಲಿ ಇಂಟರ್‌ವ್ಯೂಗಳಲ್ಲಿ ಚೆನ್ನಾಗಿ ಮಾಡಲು ಸಹಾಯ ಮಾಡುತ್ತೆ.

ಆದರೆ ವಿಪರೀತ ಮತ್ತು ತುಂಬಾ ಸಮಯದಿಂದ ಇರುವ ಒತ್ತಡ ದೇಹಕ್ಕೆ ಹಾನಿಕರ. ಯಾಕಂದ್ರೆ ಇದು ದೇಹದ ಮೇಲೆ, ಮನಸ್ಸಿನ ಮೇಲೆ, ನಿಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತೆ. ಇದರಿಂದ ನಿಮ್ಮ ನಡವಳಿಕೆ ಸ್ವಭಾವ ಎಲ್ಲಾ ಬದಲಾಗಬಹುದು. ತುಂಬ ಸಮಯದ ವರೆಗೆ ಒತ್ತಡ ಇದ್ದರೆ ಕುಡಿಯೋದು, ಡ್ರಗ್ಸ್‌ ತಗೊಳ್ಳುವಂಥ ಚಟಗಳಿಗೂ ಬಲಿ ಬೀಳಬಹುದು. ಇದಿಷ್ಟೇ ಅಲ್ಲ, ಕೆಲವೊಮ್ಮೆ ವಿಪರೀತ ಸುಸ್ತಾಗುತ್ತೆ, ಖಿನ್ನತೆ ಬರುತ್ತೆ, ಆತ್ಮಹತ್ಯೆ ಮಾಡಿಕೊಳ್ಳುವಂಥ ಯೋಚನೆಗಳೂ ಬರಬಹುದು.

ಒತ್ತಡದಿಂದ ಎಲ್ಲರಿಗೂ ಒಂದೇ ರೀತಿಯ ಹಾನಿ ಆಗದೇ ಇದ್ದರೂ ಇದರಿಂದ ಬೇರೆ ಬೇರೆ ರೀತಿಯ ಕಾಯಿಲೆಗಳು ಬರುತ್ತೆ. ಅಷ್ಟೇ ಅಲ್ಲ, ಹೆಚ್ಚು ಕಡಿಮೆ ದೇಹದ ಎಲ್ಲಾ ಭಾಗಗಳ ಮೇಲೂ ಇದು ಪರಿಣಾಮ ಬೀರಬಹುದು.