ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2018 | ಬೈಬಲ್‌ ಈಗಿನ ಕಾಲಕ್ಕೂ ಸೂಕ್ತ ಆಗಿದೆಯಾ?

ಬೈಬಲ್‌ ಈಗಿನ ಕಾಲಕ್ಕೂ ಸೂಕ್ತ ಆಗಿದೆಯಾ?

ಈಗಿನ ಉಚ್ಚ ತಂತ್ರಜ್ಞಾನದ ಜಗತ್ತಿನಲ್ಲಿ ಲಭ್ಯವಿರುವ ಮಾಹಿತಿಯ ಎದುರಿನಲ್ಲಿ ಬೈಬಲ್‌ ಮಾಹಿತಿ ಹಳೆಯದೂ, ಪ್ರಯೋಜನವಿಲ್ಲದ್ದೂ ಆಗಿದೆಯಾ? ಬೈಬಲ್‌ ಹೀಗನ್ನುತ್ತದೆ:

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ.”—2 ತಿಮೊಥೆಯ 3:16, 17.

ಬೈಬಲ್‌ ನಮಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಮಾರ್ಗದರ್ಶನ ಕೊಡಬಲ್ಲದೆಂಬ ಹೇಳಿಕೆ ನಿಜವೋ ಅಲ್ಲವೋ ಎಂದು ಕಾವಲಿನಬುರುಜುವಿನ ಈ ಸಂಚಿಕೆ ಪರಿಶೀಲಿಸುತ್ತದೆ.

 

ಬೈಬಲ್‌ ಮಾರ್ಗದರ್ಶನ ಈಗಿನ ಕಾಲಕ್ಕೂ ಸೂಕ್ತವೇ?

ಬೈಬಲಿನ ಮಾರ್ಗದರ್ಶನ ತುಂಬಾ ಹಳೇ ಕಾಲದ್ದೆಂದು ಕೆಲವರಿಗೆ ಅನಿಸುತ್ತದೆ. ಈಗ ಆಧುನಿಕ ಮಾಹಿತಿ ಸುಲಭವಾಗಿ ಲಭ್ಯವಿರುವುದರಿಂದ ಹೆಚ್ಚುಕಡಿಮೆ 2,000 ವರ್ಷದಷ್ಟು ಹಿಂದಿನ ಕಾಲದ ಪುಸ್ತಕಕ್ಕೆ ಯಾಕೆ ಗಮನ ಕೊಡಬೇಕು?

ಬೈಬಲ್‌ ಬೋಧನೆಗಳು​—ಎಂದೂ ಹಳೇದಾಗದ ವಿವೇಕದ ನುಡಿಗಳು

ಮನುಷ್ಯನು ಕಂಡುಹಿಡಿದಿರುವ ಹೊಸ ವಿಷಯಗಳ ಎದುರಿನಲ್ಲಿ ಬೈಬಲ್‌ ಬೋಧನೆಗಳು ಉಪಯೋಗಕ್ಕೆ ಬಾರದ್ದಾಗಿಲ್ಲ. ಬದಲಾಗಿ ಎಲ್ಲಾ ಕಾಲದಲ್ಲೂ ಯಾವಾಗಲೂ ಅನುಸರಿಸಲಿಕ್ಕಾಗುವ ಮೌಲ್ಯಗಳು ಮತ್ತು ತತ್ವಗಳ ಮೇಲೆ ಆಧಾರಿತವಾಗಿವೆ.

ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?

ಬೈಬಲ್‌ ವಿಜ್ಞಾನ ಪಠ್ಯಪುಸ್ತಕವಲ್ಲದಿದ್ದರೂ ಅದರಲ್ಲಿರುವ ವಿಜ್ಞಾನಕ್ಕೆ ಸಂಬಂಧಪಟ್ಟ ಹೇಳಿಕೆಗಳಿಂದ ನಿಮಗೆ ಆಶ್ಚರ್ಯವಾಗಬಹುದು.

1 ಸಮಸ್ಯೆಗಳಿಂದ ದೂರವಿರಲು ಸಹಾಯ

ಜೀವನದ ಕೆಲವು ದೊಡ್ಡ ಸಮಸ್ಯೆಗಳಿಂದ ದೂರವಿರಲು ಬೈಬಲಿನ ವಿವೇಕ ಜನರಿಗೆ ಹೇಗೆ ಸಹಾಯ ಮಾಡಿದೆ ಎಂದು ಗಮನಿಸಿ.

2 ಸಮಸ್ಯೆಗಳನ್ನು ಬಗೆಹರಿಸಲು ಸಹಾಯ

ಅತಿಯಾದ ಚಿಂತೆ, ಕೆಲಸ ಮುಂದೂಡುವುದು, ಒಂಟಿತನದಂಥ ಬೇಗನೆ ಹೋಗದ, ನಿರಾಶೆಗೊಳಿಸುವ ಸಮಸ್ಯೆಗಳನ್ನು ಜಯಿಸಲು ಬೇಕಾದ ವಿವೇಕವನ್ನು ಬೈಬಲ್‌ ಕೊಡುತ್ತದೆ.

3 ಸಮಸ್ಯೆಗಳನ್ನು ತಾಳಿಕೊಳ್ಳಲು ಸಹಾಯ

ದೀರ್ಘಕಾಲದ ಕಾಯಿಲೆ ಇಲ್ಲವೇ ಆತ್ಮೀಯರ ಸಾವಿನಂಥ ತಪ್ಪಿಸಲಾಗದ, ಬಗೆಹರಿಸಲಾಗದ ಸಮಸ್ಯೆಗಳು ಬಂದಾಗ ಏನು ಮಾಡಬಹುದು?

ಬೈಬಲಿಗೂ ನಿಮ್ಮ ಭವಿಷ್ಯಕ್ಕೂ ಇರುವ ನಂಟು

ಈ ಅನಿಶ್ಚಿತ ಲೋಕದಲ್ಲಿ ನಮ್ಮೆಲ್ಲರಿಗೂ ದಿನದಿನವೂ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ದೇವರ ವಾಕ್ಯ ಸಹಾಯಮಾಡುತ್ತದೆ. ಮಾತ್ರವಲ್ಲ ಭವಿಷ್ಯತ್ತಿನ ಬಗ್ಗೆಯೂ ಸ್ಪಷ್ಟವಾದ ನೋಟವನ್ನು ಕೊಡುತ್ತದೆ.

ನೀವೇನು ನೆನಸುತ್ತೀರಿ?

ಈ ಪ್ರಶ್ನೆಯ ಬಗ್ಗೆ ಕೆಲವರು ಏನು ನಂಬುತ್ತಾರೆ ಮತ್ತು ಬೈಬಲ್‌ ಏನು ಕಲಿಸುತ್ತದೆ ಎಂಬ ವಿಷಯಕ್ಕೆ ಗಮನಕೊಡಿ.