ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರೆಲ್ಲರೂ ಅದನ್ನು ಸ್ವೀಕರಿಸಿದರು

ಅವರೆಲ್ಲರೂ ಅದನ್ನು ಸ್ವೀಕರಿಸಿದರು

ಅವರೆಲ್ಲರೂ ಅದನ್ನು ಸ್ವೀಕರಿಸಿದರು

ಸ್ವಿಟ್ಸರ್‌ಲೆಂಡ್‌ನ ಬಾಸೆಲ್‌ನಲ್ಲಿರುವ ಒಂದು ಶಾಲೆಯಲ್ಲಿ, ವಿದ್ಯಾರ್ಥಿಗಳು ತಮಗೆ ಇಷ್ಟವಿರುವ ವಿಷಯವೊಂದರ ಕುರಿತು 10ರಿಂದ 15 ನಿಮಿಷಗಳ ಭಾಷಣವನ್ನು ತಯಾರಿಸಿಕೊಂಡು ಬರಬೇಕೆಂದು ಒಬ್ಬ ಶಿಕ್ಷಕರು ತಿಳಿಸಿದರು. ಹದಿನೈದು ವರ್ಷಪ್ರಾಯದ ರೋಸೀ, “ನಿಮ್ಮ ಯೌವನ​—⁠ಅದನ್ನು ಯಶಸ್ವಿಯಾಗಿಸುವುದು” ಎಂಬ ವಿಷಯವನ್ನು ಆಯ್ಕೆಮಾಡಿದಳು.

“ಇದು ಎಂಥ ವಿಷಯ? ನೀನು ಅಮಲೌಷಧಗಳ ಬಗ್ಗೆ ಭಾಷಣ ನೀಡಲಿದ್ದೀಯೋ?” ಎಂದು ಅವಳ ಸಹಪಾಠಿಗಳು ಅವಳನ್ನು ಪ್ರಶ್ನಿಸಿದರು.

“ಏನೆಂದು ನೀವೇ ನೋಡುವಿರಂತೆ” ಎಂದು ಅವಳು ಉತ್ತರಿಸಿದಳು.

ಅವಳ ಭಾಷಣದ ಸಮಾಪ್ತಿಯಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸಿದರು. ಆಗ ರೋಸೀ ಉದ್ಗರಿಸಿದ್ದು: “ಒಬ್ಬ ವ್ಯಕ್ತಿಯು ತನ್ನ ಯೌವನದಲ್ಲಿ ಹೇಗೆ ಯಶಸ್ವಿಯನ್ನು ಪಡೆಯಸಾಧ್ಯವಿದೆ ಎಂಬುದರ ಕುರಿತು ತಿಳಿಸಲು ಹದಿನೈದು ನಿಮಿಷಗಳು ನಿಜವಾಗಿಯೂ ಸಾಕಾಗುವುದಿಲ್ಲ.” ಆದುದರಿಂದ ಅವಳು ಹೇಳಿದ್ದು: “ನಿಮ್ಮೆಲ್ಲರಿಗಾಗಿ ನಾನು ಒಂದು ಗಿಫ್ಟ್‌ ಅನ್ನು ತಂದಿದ್ದೇನೆ.” ಆಗ ಅವಳು ಪ್ರತಿಯೊಬ್ಬ ವಿದ್ಯಾರ್ಥಿಗೆ, ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ ಒಂದು ಪ್ರತಿಯನ್ನು ನೀಡಿದಳು, ಅಂದರೆ ಒಟ್ಟಿಗೆ 20 ಪುಸ್ತಕಗಳನ್ನು ವಿತರಿಸಿದಳು. ಅವುಗಳನ್ನು ನೀಟಾಗಿ ಪ್ಯಾಕ್‌ ಮಾಡಲಾಗಿತ್ತು, ಮತ್ತು ಪ್ರತಿಯೊಬ್ಬ ಸಹಪಾಠಿಯ ಹೆಸರುಗಳನ್ನು ಅವುಗಳ ಮೇಲೆ ಬರೆಯಲಾಗಿತ್ತು.

ಎಲ್ಲರೂ ಕೃತಜ್ಞತಾಭಾವದಿಂದ ಆ ಪುಸ್ತಕವನ್ನು ಸ್ವೀಕರಿಸಿದರು ಮತ್ತು ನಂತರ ಅದರಲ್ಲಿ ಒಳಗೂಡಿರುವ ವಿಷಯಗಳನ್ನು ಅವರು ಕೂಲಂಕಷವಾಗಿ ಪರೀಕ್ಷಿಸುತ್ತಿರುವುದನ್ನು ನೋಡಸಾಧ್ಯವಿತ್ತು. ಇದರಲ್ಲಿ ಈ ಮುಂದಿನ ಅಧ್ಯಾಯಗಳು ಒಳಗೂಡಿದ್ದವು: “ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ಮಾಡುವುದು ಹೇಗೆ?,” “ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?,” “ನಾನು ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳಬೇಕು?,” “ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?,” ಮತ್ತು “ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?”

ಈ ಪುಸ್ತಕದಲ್ಲಿ ಒಟ್ಟು 39 ಅಧ್ಯಾಯಗಳಿವೆ. ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ಅಪೇಕ್ಷಿಸುವುದಾದರೆ, ಈ ಲೇಖನದ ಜೊತೆಯಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಕೂಪನಿನ ಮೇಲೆ ತೋರಿಸಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕ ವಿಳಾಸಕ್ಕೆ ಕಳುಹಿಸಿರಿ.

ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿರಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.