ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಾಕ್ಷಿ ಭರವಸಾರ್ಹ ಮಾರ್ಗದರ್ಶಿ ಆಗಿದೆಯಾ?

ನಿಮ್ಮ ಮನಸ್ಸಾಕ್ಷಿ ಭರವಸಾರ್ಹ ಮಾರ್ಗದರ್ಶಿ ಆಗಿದೆಯಾ?

“ಶುದ್ಧವಾದ ಹೃದಯದಿಂದಲೂ ಒಳ್ಳೇ ಮನಸ್ಸಾಕ್ಷಿಯಿಂದಲೂ . . . ನಂಬಿಕೆಯಿಂದಲೂ ಹುಟ್ಟಿದ ಪ್ರೀತಿಯೇ ಈ ಆಜ್ಞೆಯ ನಿಜವಾದ ಉದ್ದೇಶವಾಗಿದೆ.” —1 ತಿಮೊ. 1:5.

ಗೀತೆಗಳು: 57, 48

1, 2. (ಎ) ನಮಗೆ ಮನಸ್ಸಾಕ್ಷಿ ಕೊಟ್ಟದ್ದು ಯಾರು? (ಬಿ) ಅದನ್ನು ಪಡೆದಿರುವುದಕ್ಕೆ ನಾವೇಕೆ ಕೃತಜ್ಞರಾಗಿರಬೇಕು?

ಯೆಹೋವ ದೇವರು ಮನುಷ್ಯರನ್ನು ಸೃಷ್ಟಿಸಿದಾಗ ಇಚ್ಛಾಸ್ವಾತಂತ್ರ್ಯ ಕೊಟ್ಟನು. ಅಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ ಕೊಟ್ಟನು. ಸರಿಯಾದ ಆಯ್ಕೆಗಳನ್ನು ಮಾಡಲು ಯೆಹೋವನು ನಮಗೊಂದು ಮಾರ್ಗದರ್ಶಿಯನ್ನು ಸಹ ಕೊಟ್ಟಿದ್ದಾನೆ. ಅದು ಮನಸ್ಸಾಕ್ಷಿ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ನಮ್ಮಲ್ಲೇ ಇರುವ ಪ್ರಜ್ಞೆ ಅದಾಗಿದೆ. ಮನಸ್ಸಾಕ್ಷಿಯನ್ನು ಸರಿಯಾಗಿ ಬಳಸಿದರೆ ಒಳ್ಳೇದನ್ನು ಮಾಡಲು ಮತ್ತು ಕೆಟ್ಟದ್ದರಿಂದ ದೂರವಿರಲು ನೆರವಾಗುತ್ತದೆ. ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ನಾವು ಯಶಸ್ವಿಗಳಾಗಬೇಕು ಎಂದು ಬಯಸುತ್ತಾನೆ ಎಂಬುದಕ್ಕೆ ಪುರಾವೆಯೇ ಈ ಮನಸ್ಸಾಕ್ಷಿ.

2 ಲೋಕದ ಅನೇಕರಿಗೆ ಬೈಬಲ್‌ ಮಟ್ಟಗಳು ಗೊತ್ತಿಲ್ಲದಿದ್ದರೂ ಒಳ್ಳೇದನ್ನು ಮಾಡುತ್ತಾರೆ, ಕೆಟ್ಟದ್ದನ್ನು ದ್ವೇಷಿಸುತ್ತಾರೆ. (ರೋಮನ್ನರಿಗೆ 2:14, 15 ಓದಿ.) ಯಾಕೆ? ಅವರಿಗೆ ಮನಸ್ಸಾಕ್ಷಿ ಇರುವುದರಿಂದಲೇ. ಕೆಟ್ಟ ವಿಷಯಗಳನ್ನು ಮಾಡದಂತೆ ಅದು ಅನೇಕರನ್ನು ತಡೆಯುತ್ತದೆ. ಯಾರಿಗೂ ಮನಸ್ಸಾಕ್ಷಿ ಇಲ್ಲದಿರುತ್ತಿದ್ದರೆ ಲೋಕ ಈಗ ಇರುವುದಕ್ಕಿಂತ ಹೆಚ್ಚು ಕೆಟ್ಟದ್ದಾಗಿರುತ್ತಿತ್ತು. ನೆನಸಿದರೇ ಭಯವಾಗುತ್ತದೆ! ಮನುಷ್ಯರಿಗೆ ಮನಸ್ಸಾಕ್ಷಿ ಕೊಟ್ಟಿರುವುದಕ್ಕೆ ನಾವು ಯೆಹೋವನಿಗೆ ಧನ್ಯವಾದ ಹೇಳಬೇಕು.

3. ತರಬೇತಿ ಹೊಂದಿರುವ ಮನಸ್ಸಾಕ್ಷಿಯ ಪ್ರಯೋಜನಗಳೇನು?

3 ಮನಸ್ಸಾಕ್ಷಿಯನ್ನು ತರಬೇತಿಗೊಳಿಸಬೇಕು ಎಂಬುದರ ಬಗ್ಗೆ ಲೋಕದಲ್ಲಿ ಅನೇಕರಿಗೆ ಗೊತ್ತಿಲ್ಲ. ಆದರೆ ಯೆಹೋವನ ಜನರು ತಮ್ಮ ಮನಸ್ಸಾಕ್ಷಿ ಚೆನ್ನಾಗಿ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಸಭೆಯ ಐಕ್ಯವನ್ನು ಕಾಪಾಡಲು ಮನಸ್ಸಾಕ್ಷಿ ಚೆನ್ನಾಗಿ ಕೆಲಸ ಮಾಡುವುದು ತುಂಬ ಮುಖ್ಯ. ಹಾಗಾಗಿ ಅದನ್ನು ತರಬೇತಿಗೊಳಿಸುತ್ತಾರೆ. ಆಗ ನಮ್ಮ ಮನಸ್ಸಾಕ್ಷಿ ನಮಗೆ ಸರಿ-ತಪ್ಪು, ಒಳ್ಳೇದು-ಕೆಟ್ಟದು ಯಾವುದು ಎಂಬ ವಿಷಯಗಳ ಬಗ್ಗೆ ಬೈಬಲಿನ ಮಟ್ಟಗಳೇನೆಂದು ನೆನಪು ಹುಟ್ಟಿಸುತ್ತದೆ. ಅದಕ್ಕಾಗಿ ಕೇವಲ ಬೈಬಲಿನ ಜ್ಞಾನ ಇದ್ದರೆ ಮಾತ್ರ ಸಾಲದು. ನಾವು ದೇವರ ಮಟ್ಟಗಳನ್ನು ಪ್ರೀತಿಸಬೇಕು. ಆ ಮಟ್ಟಗಳು ನಮ್ಮ ಒಳಿತಿಗಾಗಿಯೇ ಇವೆ ಎಂಬ ನಂಬಿಕೆ ಸಹ ಇರಬೇಕು. ಪೌಲನು ಹೀಗೆ ಬರೆದನು: “ಶುದ್ಧವಾದ ಹೃದಯದಿಂದಲೂ ಒಳ್ಳೇ ಮನಸ್ಸಾಕ್ಷಿಯಿಂದಲೂ ನಿಷ್ಕಪಟವಾದ ನಂಬಿಕೆಯಿಂದಲೂ ಹುಟ್ಟಿದ ಪ್ರೀತಿಯೇ ಈ ಆಜ್ಞೆಯ ನಿಜವಾದ ಉದ್ದೇಶವಾಗಿದೆ.” (1 ತಿಮೊ. 1:5) ಮನಸ್ಸಾಕ್ಷಿಯನ್ನು ತರಬೇತಿಗೊಳಿಸಿ ಅದರ ಪ್ರಕಾರ ನಡೆದರೆ ಯೆಹೋವನ ಮೇಲೆ ನಮಗಿರುವ ನಂಬಿಕೆ ಮತ್ತು ಪ್ರೀತಿ ಹೆಚ್ಚಾಗುತ್ತದೆ. ನಮ್ಮ ಮನಸ್ಸಾಕ್ಷಿಯನ್ನು ಬಳಸುವ ವಿಧ ಯೆಹೋವನ ಜೊತೆ ನಮಗಿರುವ ಸಂಬಂಧ ಎಷ್ಟು ಆಪ್ತವಾಗಿದೆ ಮತ್ತು ಆತನನ್ನು ಮೆಚ್ಚಿಸಲು ನಾವೆಷ್ಟು ಬಯಸುತ್ತೇವೆಂದು ತೋರಿಸುತ್ತದೆ. ನಾವೆಂಥ ವ್ಯಕ್ತಿ ಆಗಿದ್ದೇವೆಂದೂ ನಮ್ಮ ಮನಸ್ಸಾಕ್ಷಿ ತೋರಿಸುತ್ತದೆ.

4. ನಮ್ಮ ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಬಹುದು?

4 ಆದರೆ ನಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡುವುದು ಹೇಗೆ? ತಪ್ಪದೇ ಬೈಬಲ್‌ ಅಧ್ಯಯನ ಮಾಡುವ, ಓದಿದ್ದನ್ನು ಧ್ಯಾನಿಸುವ ಮತ್ತು ಕಲಿತದ್ದನ್ನು ಅನ್ವಯಿಸಲು ಯೆಹೋವನ ಸಹಾಯ ಕೇಳುವ ಮೂಲಕ. ಇದರರ್ಥ ಬೈಬಲಿನಲ್ಲಿರುವ ಸತ್ಯಾಂಶಗಳನ್ನು ಮತ್ತು ಆಜ್ಞೆಗಳನ್ನು ತಿಳಿದರೆ ಮಾತ್ರ ಸಾಲದು. ಬೈಬಲ್‌ ಅಧ್ಯಯನ ಮಾಡುವಾಗ ನಮ್ಮ ಗುರಿ ಯೆಹೋವನನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳುವುದೇ ಆಗಿರಬೇಕು. ಆತನ ವ್ಯಕ್ತಿತ್ವ ಎಂಥದ್ದು, ಆತನು ಯಾವುದನ್ನು ಇಷ್ಟಪಡುತ್ತಾನೆ, ಯಾವುದನ್ನು ದ್ವೇಷಿಸುತ್ತಾನೆ ಎಂದು ತಿಳಿಯುತ್ತೇವೆ. ಆತನ ಬಗ್ಗೆ ನಾವು ಹೆಚ್ಚನ್ನು ತಿಳಿಯುತ್ತಾ ಹೋದಂತೆ, ಕ್ರಮೇಣ ನಮ್ಮ ಮನಸ್ಸಾಕ್ಷಿ ಆತನ ದೃಷ್ಟಿಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಗುರುತಿಸುವಷ್ಟು ಚುರುಕಾಗುತ್ತದೆ. ನಾವೆಷ್ಟು ಹೆಚ್ಚಾಗಿ ಮನಸ್ಸಾಕ್ಷಿಯನ್ನು ತರಬೇತುಗೊಳಿಸುತ್ತೇವೊ ಅಷ್ಟು ಹೆಚ್ಚಾಗಿ ಯೆಹೋವನಂತೆ ಯೋಚಿಸಲು ನಮ್ಮಿಂದಾಗುತ್ತದೆ.

5. ಈ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

5 ಹಾಗಿದ್ದರೂ ನಮಗೆ ಈ ಪ್ರಶ್ನೆಗಳು ಬರಬಹುದು: ಚೆನ್ನಾಗಿ ತರಬೇತಿ ಹೊಂದಿರುವ ಮನಸ್ಸಾಕ್ಷಿ ತೀರ್ಮಾನಗಳನ್ನು ಮಾಡಲು ನೆರವಾಗುವುದು ಹೇಗೆ? ಜೊತೆ ಕ್ರೈಸ್ತನೊಬ್ಬನ ಮನಸ್ಸಾಕ್ಷಿಯನ್ನು ನಾವು ಗೌರವಿಸುವುದು ಹೇಗೆ? ಒಳ್ಳೇದನ್ನು ಮಾಡಲು ಮನಸ್ಸಾಕ್ಷಿ ನಮ್ಮನ್ನು ಪ್ರಚೋದಿಸುವುದು ಹೇಗೆ? ಚೆನ್ನಾಗಿ ತರಬೇತಿ ಹೊಂದಿರುವ ಮನಸ್ಸಾಕ್ಷಿ (1) ಆರೋಗ್ಯ (2) ವ್ಯಾಯಾಮ-ಮನೋರಂಜನೆ (3) ಸಾರುವ ಕೆಲಸ ಎಂಬ ಮೂರು ಕ್ಷೇತ್ರಗಳಲ್ಲಿ ನಮಗೆ ನೆರವಾಗುತ್ತದೆ. ಇದನ್ನೀಗ ನೋಡೋಣ.

ಮಿತಿಮೀರಿ ಹೋಗದಿರಿ

6. ತೀರ್ಮಾನಗಳನ್ನು ಮಾಡಬೇಕಾಗಿ ಬರುವ ಒಂದು ಕ್ಷೇತ್ರ ಯಾವುದು?

6 ನಮಗೆ ಹಾನಿ ತರುವಂಥ ವಿಷಯಗಳಿಂದ ದೂರವಿರಬೇಕೆಂದು, ತಿನ್ನುವ, ಕುಡಿಯುವ ಮತ್ತು ಇನ್ನಿತರ ವಿಷಯಗಳಲ್ಲಿ ನಾವು ಮಿತಿಮೀರಿ ಹೋಗಬಾರದೆಂದು ಬೈಬಲ್‌ ನಮಗೆ ಹೇಳುತ್ತದೆ. (ಜ್ಞಾನೋ. 23:20; 2 ಕೊರಿಂ. 7:1) ನಾವು ಬೈಬಲಿನಲ್ಲಿರುವ ಸಲಹೆಯನ್ನು ಪಾಲಿಸಿದಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಹಾಗಿದ್ದರೂ ನಾವು ಅಸ್ವಸ್ಥರಾಗುತ್ತೇವೆ, ನಮಗೆ ವಯಸ್ಸಾಗುತ್ತದೆ. ಕೆಲವು ದೇಶಗಳಲ್ಲಿ ಆಧುನಿಕ ಹಾಗೂ ಇತರ ಸಾಂಪ್ರದಾಯಿಕ ಔಷಧ, ಚಿಕಿತ್ಸಾಕ್ರಮಗಳು ಲಭ್ಯ ಇವೆ. ಈ ವಿಷಯದಲ್ಲಿ ನಾವು ಯಾವ ರೀತಿಯ ತೀರ್ಮಾನಗಳನ್ನು ಮಾಡಬೇಕಾಗಿ ಬರಬಹುದು? ಬೇರೆಬೇರೆ ರೀತಿಯ ಚಿಕಿತ್ಸೆಯ ಬಗ್ಗೆ ಅನೇಕ ಸಹೋದರ ಸಹೋದರಿಯರು ಬ್ರಾಂಚ್‌ ಆಫೀಸಿಗೆ ಪತ್ರ ಬರೆದು, “ಯೆಹೋವನ ಸೇವಕರು ಇಂಥ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದಾ?” ಎಂದು ಕೇಳುತ್ತಾರೆ.

7. ರಕ್ತದ ಬಗ್ಗೆ ನಾವು ಹೇಗೆ ತೀರ್ಮಾನಗಳನ್ನು ಮಾಡಬಹುದು?

7 ತಾನೇನು ಮಾಡಬೇಕೆಂದು ಒಬ್ಬ ಕ್ರೈಸ್ತನು ಕೇಳಿದರೂ ಅವನ ಚಿಕಿತ್ಸೆ ವಿಷಯದಲ್ಲಿ ನಿರ್ಣಯಗಳನ್ನು ಮಾಡುವ ಅಧಿಕಾರ ಬ್ರಾಂಚ್‌ ಆಫೀಸಿಗಾಗಲಿ, ಸಭೆಯ ಹಿರಿಯರಿಗಾಗಲಿ ಇಲ್ಲ. (ಗಲಾ. 6:5) ಆದರೆ ವಿವೇಕಭರಿತ ತೀರ್ಮಾನವನ್ನು ಮಾಡಲು ಒಬ್ಬ ಹಿರಿಯನು ಸಹಾಯ ಮಾಡಬಹುದು. ಯೆಹೋವನ ನೋಟವೇನೆಂದು ಅವನು ತಿಳಿಸಬಹುದು. ಉದಾಹರಣೆಗೆ ರಕ್ತವನ್ನು ವಿಸರ್ಜಿಸುವಂತೆ ದೇವರು ಆಜ್ಞೆ ಕೊಟ್ಟಿದ್ದಾನೆ. (ಅ. ಕಾ. 15:29) ಈ ಆಜ್ಞೆಯು ಒಬ್ಬ ಕ್ರೈಸ್ತನು ತೆಗೆದುಕೊಳ್ಳುವ ಚಿಕಿತ್ಸೆಯಲ್ಲಿ ರಕ್ತ ಅಥವಾ ಅದರ ನಾಲ್ಕು ಪ್ರಮುಖ ಘಟಕಗಳಲ್ಲಿ ಯಾವುದೂ ಇರಬಾರದೆಂದು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಈ ಮಾಹಿತಿಯು ಕ್ರೈಸ್ತನೊಬ್ಬನ ಮನಸ್ಸಾಕ್ಷಿಗೆ ರಕ್ತದ ನಾಲ್ಕು ಘಟಕಗಳಿಂದ ತೆಗೆಯಲಾದ ಅಂಶಗಳನ್ನು ಸ್ವೀಕರಿಸಬೇಕಾ ಇಲ್ಲವಾ ಎಂದು ತೀರ್ಮಾನಿಸಲು ಸಹ ಸಹಾಯ ಮಾಡುತ್ತದೆ. * (ಪಾದಟಿಪ್ಪಣಿ ನೋಡಿ.) ಚಿಕಿತ್ಸೆ ಬಗ್ಗೆ ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ಬೇರೆ ಯಾವ ಬೈಬಲ್‌ ಸಲಹೆ ನೆರವಾಗುತ್ತದೆ?

8. ಆರೋಗ್ಯದ ಬಗ್ಗೆ ನಾವು ವಿವೇಕಯುತ ಆಯ್ಕೆಗಳನ್ನು ಮಾಡಲು ಫಿಲಿಪ್ಪಿ 4:5 ಹೇಗೆ ಸಹಾಯ ಮಾಡುತ್ತದೆ?

8 ಜ್ಞಾನೋಕ್ತಿ 14:15 ಹೀಗನ್ನುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು [ಹೆಜ್ಜೆಯನ್ನು, ನೂತನ ಲೋಕ ಭಾಷಾಂತರ] ಚೆನ್ನಾಗಿ ಗಮನಿಸುವನು.” ಕೆಲವು ಕಾಯಿಲೆಗಳಿಗೆ ಇಂದು ಚಿಕಿತ್ಸೆ ಇಲ್ಲ. ಹಾಗಾಗಿ ಅಂಥ ಕಾಯಿಲೆಗಳನ್ನು ಗುಣಪಡಿಸುತ್ತವೆಂದು ಹೇಳಿಕೊಂಡರೂ ಅದಕ್ಕಾಗಿ ಪಕ್ಕಾ ಪುರಾವೆ ಇಲ್ಲದ ಚಿಕಿತ್ಸೆಗಳ ಬಗ್ಗೆ ನಾವು ಎಚ್ಚರ ವಹಿಸಬೇಕು. ಪೌಲನು ಹೀಗೆ ಬರೆದನು: “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” (ಫಿಲಿ. 4:5) ನ್ಯಾಯಸಮ್ಮತತೆ ಅಂದರೆ ಮಿತಿಮೀರಿ ಹೋಗದಿರುವುದು. ನಮ್ಮಲ್ಲಿ ಈ ಗುಣವಿದ್ದರೆ ಮೂರೂ ಹೊತ್ತು ಆರೋಗ್ಯದ ಬಗ್ಗೆಯೇ ಯೋಚಿಸುತ್ತಾ ಇರುವ ಬದಲು ಯೆಹೋವನ ಆರಾಧನೆಯ ಮೇಲೆ ನಾವು ಗಮನವಿಡುತ್ತೇವೆ. ಆರೋಗ್ಯವೇ ನಮ್ಮ ಜೀವನದಲ್ಲಿ ಮುಖ್ಯ ವಿಷಯವಾದರೆ ನಾವು ಸ್ವಾರ್ಥಿಗಳಾಗಿ ಬಿಡುತ್ತೇವೆ. (ಫಿಲಿ. 2:4) ಈ ಲೋಕದಲ್ಲಿ ನಮಗೆ ಪರಿಪೂರ್ಣ ಆರೋಗ್ಯ ಸಿಗುವುದಿಲ್ಲ ಎಂದು ನಮಗೆ ಗೊತ್ತು. ಹಾಗಾಗಿ ಯೆಹೋವನ ಆರಾಧನೆಯೇ ನಿಮ್ಮ ಜೀವನದಲ್ಲಿ ಮುಖ್ಯ ಎಂದು ಖಚಿತಪಡಿಸಿಕೊಳ್ಳಿ.—ಫಿಲಿಪ್ಪಿ 1:10 ಓದಿ.

ನಿಮಗೆ ಉತ್ತಮ ಅನಿಸಿದ್ದೆಲ್ಲಾ ಬೇರೆಯವರಿಗೂ ಅನಿಸಬೇಕೆಂದು ಒತ್ತಾಯಿಸುತ್ತೀರಾ? (ಪ್ಯಾರ 9 ನೋಡಿ)

9. (ಎ) ಆರೋಗ್ಯದ ಬಗ್ಗೆ ನಾವು ಮಾಡುವ ತೀರ್ಮಾನಗಳನ್ನು ರೋಮನ್ನರಿಗೆ 14:13, 19 ಹೇಗೆ ಪ್ರಭಾವಿಸುತ್ತದೆ? (ಬಿ) ಸಭೆಯ ಐಕ್ಯ ಹೇಗೆ ಅಪಾಯಕ್ಕೆ ಒಳಗಾಗಬಹುದು?

9 ಮಿತಿಮೀರಿ ಯಾವುದನ್ನೂ ಮಾಡದ ಕ್ರೈಸ್ತನೊಬ್ಬ ತನಗೆ ಉತ್ತಮವೆಂದು ಅನಿಸಿದ್ದನ್ನು ಬೇರೆಯವರೂ ಮಾಡಬೇಕೆಂದು ಒತ್ತಾಯಿಸುವುದಿಲ್ಲ. ಒಂದು ದೇಶದಲ್ಲಿ ದಂಪತಿಯೊಂದು ಇದನ್ನೇ ಮಾಡಿದರು. ಆಹಾರದ ಜೊತೆಗೆ ಪೌಷ್ಟಿಕಾಂಶ ಇರುವ ದ್ರವ್ಯ, ಪದಾರ್ಥಗಳನ್ನು ಸೇವಿಸಬೇಕು ಮತ್ತು ನಿರ್ದಿಷ್ಟ ಪಥ್ಯವನ್ನು ಮಾಡಬೇಕೆಂದು ಬೇರೆಯವರ ಮನವೊಪ್ಪಿಸಲು ಅವರು ಶುರು ಮಾಡಿದರು. ಕೆಲವರು ಅವರ ಮಾತು ಕೇಳಿದರು. ಇನ್ನು ಕೆಲವರು ಕೇಳಲಿಲ್ಲ. ಅವರು ಹೇಳಿದ್ದನ್ನು ಮಾಡಿ ಯಾವುದೇ ಪ್ರಯೋಜನ ಆಗದಿದ್ದಾಗ ತುಂಬ ಮಂದಿ ಸಹೋದರ ಸಹೋದರಿಯರಿಗೆ ಬೇಜಾರಾಯಿತು. ಪೌಷ್ಟಿಕಾಂಶ ಇರುವ ದ್ರವ್ಯ, ಪದಾರ್ಥಗಳನ್ನು ಸೇವಿಸಬೇಕಾ, ಪಥ್ಯವನ್ನು ಪಾಲಿಸಬೇಕಾ ಇಲ್ಲವಾ ಎಂದು ಆ ದಂಪತಿಯು ತಮಗೋಸ್ಕರ ಮಾತ್ರ ತೀರ್ಮಾನ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಹೀಗೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಸಭೆಯ ಐಕ್ಯ ಮುರಿದದ್ದು ಸರಿಯಾಗಿತ್ತಾ? ಪುರಾತನ ರೋಮ್‍ನಲ್ಲಿ ಕೆಲವು ಕ್ರೈಸ್ತರಿಗೆ ಕೆಲವು ರೀತಿಯ ಆಹಾರ ಮತ್ತು ಹಬ್ಬ-ಉತ್ಸವಗಳ ಬಗ್ಗೆ ಬೇರೆಬೇರೆ ನೋಟವಿತ್ತು. ಅವರಿಗೆ ಪೌಲನು ಈ ಬುದ್ಧಿವಾದ ಕೊಟ್ಟನು: “ಒಬ್ಬ ಮನುಷ್ಯನು ಒಂದು ದಿನವನ್ನು ಇನ್ನೊಂದಕ್ಕಿಂತ ವಿಶೇಷವಾಗಿ ಎಣಿಸುತ್ತಾನೆ; ಇನ್ನೊಬ್ಬ ಮನುಷ್ಯನು ಎಲ್ಲ ದಿನಗಳನ್ನು ಸಮಾನವಾಗಿ ಎಣಿಸುತ್ತಾನೆ. ಪ್ರತಿಯೊಬ್ಬನು ತನ್ನ ಮನಸ್ಸಿನಲ್ಲಿ ಪೂರ್ಣವಾಗಿ ನಿಶ್ಚಯಿಸಿಕೊಂಡಿರಲಿ.” ಹಾಗಾಗಿ ಇನ್ನೊಬ್ಬರನ್ನು ಎಡವಿಸದಂತೆ ಅಥವಾ ದಾರಿ ತಪ್ಪಿಸದಂತೆ ನಾವು ಎಚ್ಚರವಾಗಿರೋಣ.—ರೋಮನ್ನರಿಗೆ 14:5, 13, 15, 19, 20 ಓದಿ.

10. ಬೇರೆಯವರ ವೈಯಕ್ತಿಕ ತೀರ್ಮಾನಗಳನ್ನು ನಾವೇಕೆ ಗೌರವಿಸಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

10 ಸಭೆಯ ಕೆಲವು ಸಹೋದರ ಸಹೋದರಿಯರು ಒಂದು ವೈಯಕ್ತಿಕ ವಿಷಯದಲ್ಲಿ ಮಾಡುವ ನಿರ್ಣಯ ನಮಗೆ ಅರ್ಥವಾಗದೇ ಇರಬಹುದು. ಆಗೇನು ಮಾಡುವುದು? ಆ ವ್ಯಕ್ತಿಯ ಬಗ್ಗೆ ನಮ್ಮದೇ ಆದ ತೀರ್ಮಾನಕ್ಕೆ ಬರಬಾರದು. ಅಥವಾ ಅವನು/ಅವಳು ಮಾಡಿರುವ ನಿರ್ಣಯವನ್ನು ಬದಲಿಸುವಂತೆ ಒತ್ತಾಯಿಸಬಾರದು. ಬಹುಶಃ ಆ ವ್ಯಕ್ತಿ ತನ್ನ ಮನಸ್ಸಾಕ್ಷಿಯನ್ನು ಇನ್ನೂ ಹೆಚ್ಚು ತರಬೇತಿಗೊಳಿಸುವ ಅಗತ್ಯವಿರಬಹುದು, ತುಂಬ ಸೂಕ್ಷ್ಮ ಮನಸ್ಸಾಕ್ಷಿ ಅವರಿಗಿರಬಹುದು. (1 ಕೊರಿಂ. 8:11, 12) ಅಥವಾ ನಮ್ಮ ಮನಸ್ಸಾಕ್ಷಿಗೇ ಇನ್ನಷ್ಟು ತರಬೇತಿಯ ಅಗತ್ಯವಿರಬಹುದು. ಹಾಗಾಗಿ ಆರೋಗ್ಯಕ್ಕೆ ಮತ್ತು ಇತರ ವಿಷಯಗಳ ಬಗ್ಗೆ ನಾವು ಸ್ವಂತ ತೀರ್ಮಾನ ಮಾಡಬೇಕು ಮತ್ತು ಅದರಿಂದ ಬರುವ ಫಲಿತಾಂಶಕ್ಕೆ ನಾವೇ ಜವಾಬ್ದಾರರು ಆಗಿರಬೇಕು.

ವ್ಯಾಯಾಮ-ಮನರಂಜನೆಯಲ್ಲಿ ಆನಂದಿಸಿ

11, 12. ವ್ಯಾಯಾಮ-ಮನರಂಜನೆಯನ್ನು ಆರಿಸಿಕೊಳ್ಳುವ ವಿಷಯದಲ್ಲಿ ಬೈಬಲ್‌ ನಮಗೆ ಹೇಗೆ ಸಹಾಯ ಮಾಡುತ್ತದೆ?

11 ವ್ಯಾಯಾಮ-ಮನರಂಜನೆಯಲ್ಲಿ ಆನಂದಿಸುವಂಥ ಮತ್ತು ಅದರಿಂದ ಪ್ರಯೋಜನ ಪಡೆಯುವಂಥ ರೀತಿಯಲ್ಲಿ ಯೆಹೋವನು ನಮ್ಮನ್ನು ಸೃಷ್ಟಿಸಿದ್ದಾನೆ. ‘ನಗುವುದಕ್ಕೆ’ ಮತ್ತು ‘ಕುಣಿದಾಡುವುದಕ್ಕೆ’ ಅದರದ್ದೇ ಆದ ಸಮಯ ಇದೆ ಎಂದು ಸೊಲೊಮೋನನು ಬರೆದನು. (ಪ್ರಸಂ. 3:4) ಹಾಗಂತ ಎಲ್ಲಾ ರೀತಿಯ ವ್ಯಾಯಾಮ-ಮನರಂಜನೆ ನಮಗೆ ಪ್ರಯೋಜನ ತರುತ್ತದೆ, ಅದರಿಂದ ದೇಹ-ಮನಸ್ಸಿಗೆ ಆರಾಮ, ಚೈತನ್ಯ ಸಿಗುತ್ತದೆಂದು ಹೇಳಲಿಕ್ಕೆ ಆಗುವುದಿಲ್ಲ. ವ್ಯಾಯಾಮ-ಮನರಂಜನೆಯಲ್ಲಿ ತೀರ ಹೆಚ್ಚು ಸಮಯ ಕಳೆಯಲೂಬಾರದು. ಯೆಹೋವನು ಮೆಚ್ಚುವಂಥ ವ್ಯಾಯಾಮ-ಮನರಂಜನೆಯಲ್ಲಿ ಆನಂದಿಸಲು ಮತ್ತು ಅದರಿಂದ ಪ್ರಯೋಜನ ಹೊಂದಲು ನಮ್ಮ ಮನಸ್ಸಾಕ್ಷಿ ಹೇಗೆ ನೆರವಾಗುತ್ತದೆ?

12 “ಶರೀರಭಾವದ ಕಾರ್ಯ”ಗಳ ಬಗ್ಗೆ ನಮಗೆ ಬೈಬಲ್‌ ಎಚ್ಚರಿಸುತ್ತದೆ. ಇದರಲ್ಲಿ “ಜಾರತ್ವ, ಅಶುದ್ಧತೆ, ಸಡಿಲು ನಡತೆ, ವಿಗ್ರಹಾರಾಧನೆ, ಪ್ರೇತವ್ಯವಹಾರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಬೇಧಗಳು, ಪಂಥಗಳು, ಮತ್ಸರ, ಕುಡಿದು ಮತ್ತೇರಿದ ಸರದಿಗಳು, ಭಾರೀ ಮೋಜು” ಇಂಥವುಗಳು ಸೇರಿವೆ. “ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂದು ಪೌಲನು ಬರೆದನು. (ಗಲಾ. 5:19-21) ಹಾಗಾಗಿ ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ಆಕ್ರಮಣ, ಪೈಪೋಟಿ, ದೇಶಪ್ರೇಮ, ಹಿಂಸಾಚಾರ ತುಂಬಿರುವ ಕ್ರೀಡೆಗಳನ್ನು ನೋಡದಿರಲು, ಅವುಗಳಲ್ಲಿ ಸೇರದಿರಲು ನನ್ನ ಮನಸ್ಸಾಕ್ಷಿ ಸಹಾಯ ಮಾಡುತ್ತದಾ? ಕಾಮಪ್ರಚೋದಕ ದೃಶ್ಯಗಳಿರುವ, ಅಥವಾ ಅನೈತಿಕತೆ, ಕುಡಿಕತನ, ಮಾಟಮಂತ್ರ, ದೆವ್ವ-ಭೂತದ ಸಿನಿಮಾ ನೋಡಲು ಮನಸ್ಸಾದಾಗ ಅದನ್ನು ನೋಡದಂತೆ ನನ್ನ ಮನಸ್ಸಾಕ್ಷಿ ನನ್ನನ್ನು ಎಚ್ಚರಿಸುತ್ತದಾ?’

13. ವ್ಯಾಯಾಮ-ಮನರಂಜನೆಯ ವಿಷಯದಲ್ಲಿ 1 ತಿಮೊಥೆಯ 4:8 ಮತ್ತು ಜ್ಞಾನೋಕ್ತಿ 13:20ರಲ್ಲಿರುವ ಸಲಹೆ ಹೇಗೆ ಸಹಾಯ ಮಾಡುತ್ತದೆ?

13 ವ್ಯಾಯಾಮ-ಮನರಂಜನೆಯ ವಿಷಯಗಳಲ್ಲಿ ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸಲು ಬೈಬಲ್‌ ತತ್ವಗಳು ಸಹಾಯ ಮಾಡುತ್ತವೆ. ಉದಾಹರಣೆಗೆ “ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ” ಎಂದು ಬೈಬಲ್‌ ಹೇಳುತ್ತದೆ. (1 ತಿಮೊ. 4:8) ದಿನಾಲು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೇದು ಮತ್ತು ಚೈತನ್ಯ ತರುತ್ತದೆಂದು ಅನೇಕರಿಗೆ ಅನಿಸುತ್ತದೆ. ಒಂದು ಗುಂಪಾಗಿ ವ್ಯಾಯಾಮ ಮಾಡುವುದರ ಬಗ್ಗೆ ಏನು? ಜ್ಞಾನೋಕ್ತಿ 13:20 ಹೀಗನ್ನುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಹಾಗಾಗಿ ನಾವೆಂಥ ವ್ಯಾಯಾಮ-ಮನರಂಜನೆಯನ್ನು ಆರಿಸಿಕೊಳ್ಳಬೇಕು ಎಂದು ನಿರ್ಧರಿಸಲು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಬಳಸುವುದು ತುಂಬ ಮುಖ್ಯ.

14. ರೋಮನ್ನರಿಗೆ 14:2-4ರಲ್ಲಿರುವ ತತ್ವಗಳನ್ನು ಒಂದು ಕುಟುಂಬ ಹೇಗೆ ಅನ್ವಯಿಸಿತು?

14 ಕ್ರಿಸ್ಟಿಯನ್‌ ಮತ್ತು ಡ್ಯಾನಿಯೆಲಾ ಎಂಬ ದಂಪತಿಗೆ ಇಬ್ಬರು ಹದಿವಯಸ್ಸಿನ ಹೆಣ್ಮಕ್ಕಳಿದ್ದಾರೆ. ಕ್ರಿಸ್ಟಿಯನ್‌ ಹೀಗನ್ನುತ್ತಾರೆ: “ನಮ್ಮ ಕುಟುಂಬ ಆರಾಧನಾ ಸಮಯದಲ್ಲಿ ವ್ಯಾಯಾಮ-ಮನರಂಜನೆಯ ಬಗ್ಗೆ ಚರ್ಚಿಸಿದೆವು. ಕೆಲವೊಂದರಿಂದ ನಮಗೆ ಮಜಾ ಸಿಗುತ್ತದಾದರೂ ಇನ್ನು ಕೆಲವುಗಳಿಂದ ನಾವು ದೂರವಿರಬೇಕೆಂದು ಕಲಿತೆವು. ನಾವು ಯಾರನ್ನು ಒಳ್ಳೇ ಸ್ನೇಹಿತರೆಂದು ಕರೆಯಬಹುದು? ಎಂಬ ಪ್ರಶ್ನೆ ಬಂದಾಗ ನಮ್ಮ ಮಗಳು ಯೆಹೋವನ ಸಾಕ್ಷಿಯಾಗಿರುವ ಕೆಲವು ಯೌವನಸ್ಥರು ತನ್ನ ಶಾಲೆಯಲ್ಲಿ ವಿರಾಮದ ಸಮಯದಲ್ಲಿ ಸರಿಯಾಗಿ ನಡಕೊಳ್ಳುವುದಿಲ್ಲ ಎಂದು ಹೇಳಿದಳು. ಹಾಗಾಗಿ ಅವರ ಹಾಗೇ ತಾನೂ ನಡಕೊಳ್ಳುವ ಒತ್ತಡ ಬಂತು ಎಂದಳು. ಅದಕ್ಕೆ ನಾವು ನಮ್ಮೆಲ್ಲರಿಗೂ ಮನಸ್ಸಾಕ್ಷಿ ಇದೆ, ಯಾರ ಜೊತೆ ಹೇಗೆ ನಡಕೊಳ್ಳಬೇಕೆಂದು ತೀರ್ಮಾನಿಸಲು ಅದೇ ನಮ್ಮನ್ನು ಮಾರ್ಗದರ್ಶಿಸಬೇಕು ಎಂದು ಅವಳಿಗೆ ಅರ್ಥಮಾಡಿಸಿದೆವು.”—ರೋಮನ್ನರಿಗೆ 14:2-4 ಓದಿ.

ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ನಿಮಗೆ ಅಪಾಯದಿಂದ ದೂರವಿರಲು ಸಹಾಯ ಮಾಡುತ್ತದೆ (ಪ್ಯಾರ 14 ನೋಡಿ)

15. ವ್ಯಾಯಾಮ-ಮನರಂಜನೆಗಾಗಿ ನಾವು ಯೋಜಿಸುತ್ತಿರುವಾಗ ಮತ್ತಾಯ 6:33 ಹೇಗೆ ಸಹಾಯ ಮಾಡುತ್ತದೆ?

15 ವ್ಯಾಯಾಮ-ಮನರಂಜನೆಯಲ್ಲಿ ನೀವೆಷ್ಟು ಸಮಯ ವ್ಯಯಿಸುತ್ತೀರಿ? ನಿಮ್ಮ ಜೀವನದಲ್ಲಿ ಮೊದಲ ಸ್ಥಾನ ಯಾವುದಕ್ಕೆ ಕೊಡುತ್ತೀರಾ? ಕೂಟ, ಸೇವೆ, ಬೈಬಲಿನ ಅಧ್ಯಯನಕ್ಕಾ ಅಥವಾ ವ್ಯಾಯಾಮ-ಮನರಂಜನೆಗಾ? ನಿಮಗೆ ಯಾವುದು ತುಂಬ ಮುಖ್ಯ? ಯೇಸು ಹೀಗಂದನು: “ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” (ಮತ್ತಾ. 6:33) ನಿಮ್ಮ ಸಮಯವನ್ನು ಹೇಗೆ ವ್ಯಯಿಸಬೇಕು ಎಂದು ತೀರ್ಮಾನಿಸುವಾಗ ನಿಮ್ಮ ಮನಸ್ಸಾಕ್ಷಿ ಯೇಸುವಿನ ಆ ಸಲಹೆಯನ್ನು ನೆನಪಿಗೆ ತರುತ್ತದಾ?

ಸಾರಲು ಪ್ರೇರೇಪಿಸುತ್ತದೆ

16. ನಮ್ಮ ಮನಸ್ಸಾಕ್ಷಿ ಏನು ಮಾಡುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ?

16 ತರಬೇತಿ ಪಡೆದಿರುವ ಮನಸ್ಸಾಕ್ಷಿ ಕೆಟ್ಟದ್ದನ್ನು ಮಾಡದಂತೆ ಎಚ್ಚರ ನೀಡುವುದರ ಜೊತೆಗೆ ಒಳ್ಳೇದನ್ನು ಮಾಡಲು ಪ್ರೇರಣೆಯನ್ನು ಸಹ ಕೊಡುತ್ತದೆ. ಈ ಒಳ್ಳೇ ಕೆಲಸಗಳಲ್ಲೊಂದು ಮನೆಮನೆ ಮತ್ತು ಅನೌಪಚಾರಿಕವಾಗಿ ಸಾರುವುದೇ. ಇದನ್ನೇ ಪೌಲನು ಸಹ ಮಾಡಿದನು. ಅವನು ಬರೆದದ್ದು: “ಸಾರಲೇಬೇಕಾದ ಆವಶ್ಯಕತೆ ನನಗುಂಟು. ವಾಸ್ತವದಲ್ಲಿ ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!” (1 ಕೊರಿಂ. 9:16) ಪೌಲನನ್ನು ಅನುಕರಿಸುವಾಗ ನಮಗೂ ಒಳ್ಳೇ ಮನಸ್ಸಾಕ್ಷಿ ಇರುತ್ತದೆ. ಯಾಕೆಂದರೆ ಸರಿಯಾದದ್ದನ್ನು ಮಾಡುತ್ತಿದ್ದೇವೆ ಎಂಬ ಭರವಸೆ ನಮಗಿರುತ್ತದೆ. ಸುವಾರ್ತೆಯನ್ನು ಸಾರುವಾಗ ಬೇರೆಯವರ ಮನಸ್ಸಾಕ್ಷಿಯನ್ನು ಪ್ರಭಾವಿಸುತ್ತೇವೆ. ಪೌಲನು ಹೀಗಂದನು: “ನಾವು . . . ಸತ್ಯವನ್ನು ಪ್ರಕಟಪಡಿಸುತ್ತಾ ದೇವರ ದೃಷ್ಟಿಯಲ್ಲಿ ಎಲ್ಲ ಮನುಷ್ಯರ ಮನಸ್ಸಾಕ್ಷಿಗೆ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತೇವೆ.”—2 ಕೊರಿಂ. 4:2.

17. ಒಬ್ಬ ಯುವ ಸಹೋದರಿ ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಮಾತನ್ನು ಹೇಗೆ ಪಾಲಿಸಿದಳು?

17 ಜ್ಯಾಕ್ಲಿನ್‌ಗೆ 16 ವರ್ಷವಿದ್ದಾಗ ಶಾಲೆಯಲ್ಲಿ ಜೀವಶಾಸ್ತ್ರ ವಿಷಯವನ್ನು ಕಲಿಯುತ್ತಿದ್ದಳು. ಒಮ್ಮೆ ತರಗತಿಯಲ್ಲಿ ವಿಕಾಸವಾದದ ಬಗ್ಗೆ ಪಾಠ ನಡೆಯುತ್ತಿತ್ತು. ಜ್ಯಾಕ್ಲಿನ್‌ ಹೀಗನ್ನುತ್ತಾಳೆ: “ಸಾಮಾನ್ಯವಾಗಿ ನಾನು ತರಗತಿಯಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಂತೆ ಈ ಸಲ ಮಾಡಲಿಕ್ಕಾಗಲಿಲ್ಲ. ಏಕೆಂದರೆ ವಿಕಾಸವಾದವನ್ನು ಬೆಂಬಲಿಸಲು ನನ್ನ ಮನಸ್ಸಾಕ್ಷಿ ಒಪ್ಪಲಿಲ್ಲ. ಈ ವಿಷಯದ ಬಗ್ಗೆ ಶಿಕ್ಷಕರ ಬಳಿ ಹೋಗಿ ಮಾತಾಡಿದೆ. ಅವರು ನನ್ನ ಹತ್ತಿರ ತುಂಬ ಸ್ನೇಹ ಭಾವದಿಂದ ಮಾತಾಡಿದರು. ಅಷ್ಟೇ ಅಲ್ಲ ಸೃಷ್ಟಿಯ ಬಗ್ಗೆ ಇಡೀ ತರಗತಿ ಮುಂದೆ ನಿಂತು ಮಾತಾಡುವ ಅವಕಾಶವನ್ನೂ ಮಾಡಿಕೊಟ್ಟರು. ನನಗೆ ತುಂಬ ಆಶ್ಚರ್ಯವಾಯಿತು.” ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ಹೇಳಿದ್ದನ್ನು ಕೇಳಿ ಅದರ ಪ್ರಕಾರ ನಡಕೊಂಡದ್ದಕ್ಕೆ ಜ್ಯಾಕ್ಲಿನ್‌ಗೆ ತುಂಬ ತೃಪ್ತಿ ಇದೆ. ಸರಿಯಾದದ್ದನ್ನು ಮಾಡಲು ನಿಮ್ಮ ಮನಸ್ಸಾಕ್ಷಿ ಸಹ ನಿಮಗೆ ಪ್ರೇರಣೆ ನೀಡುತ್ತದಾ?

18. ಭರವಸಾರ್ಹ ಮತ್ತು ಒಳ್ಳೇ ಮನಸ್ಸಾಕ್ಷಿ ನಮಗಿರಬೇಕು ಏಕೆ?

18 ಯೆಹೋವನ ತತ್ವ ಮತ್ತು ಮಟ್ಟಗಳ ಪ್ರಕಾರ ಜೀವಿಸುವುದೇ ನಮ್ಮ ಗುರಿಯಾಗಿದೆ. ಆ ಗುರಿಯನ್ನು ತಲುಪಲು ನಮ್ಮ ಮನಸ್ಸಾಕ್ಷಿ ಸಹಾಯ ಮಾಡುತ್ತದೆ. ದೇವರ ವಾಕ್ಯವನ್ನು ದಿನಾಲೂ ಓದಿ, ಧ್ಯಾನಿಸಿ, ಕಲಿತದ್ದನ್ನು ಅನ್ವಯಿಸಿಕೊಳ್ಳುವಾಗ ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸುತ್ತೇವೆ. ಆಗ ಅದ್ಭುತ ಉಡುಗೊರೆಯಾದ ಮನಸ್ಸಾಕ್ಷಿ ನಮ್ಮ ಕ್ರೈಸ್ತ ಜೀವನಕ್ಕೆ ಭರವಸಾರ್ಹ ಮಾರ್ಗದರ್ಶಿಯಾಗಿರುತ್ತದೆ.