ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸಮೀಪಕ್ಕೆ ಬನ್ನಿರಿ

‘ಈ ವಿಷಯಗಳನ್ನು ಶಿಶುಗಳಿಗೆ ಪ್ರಕಟಪಡಿಸಿದ್ದಿ’

‘ಈ ವಿಷಯಗಳನ್ನು ಶಿಶುಗಳಿಗೆ ಪ್ರಕಟಪಡಿಸಿದ್ದಿ’

ದೇವರ ಕುರಿತು ಸತ್ಯ ತಿಳಿಯಲು ಬಯಸ್ತೀರಾ? ಅಂದರೆ ದೇವರು ಯಾರು? ಆತನ ಇಷ್ಟಾನಿಷ್ಟಗಳೇನು? ಆತನ ಚಿತ್ತ ಏನು? ಎಂದು ತಿಳಿಯಲು ಬಯಸುತ್ತೀರಾ? ಯೆಹೋವ ದೇವರು ತನ್ನ ವಾಕ್ಯವಾದ ಬೈಬಲಿನಲ್ಲಿ ತನ್ನ ಕುರಿತ ಸಮಸ್ತ ಸತ್ಯವನ್ನು ಪ್ರಕಟಪಡಿಸಿದ್ದಾನೆ. ಆದರೆ ಬೈಬಲನ್ನು ಓದಿ ಅದರ ಅರ್ಥವನ್ನು ಗ್ರಹಿಸಲು ಎಲ್ಲರಿಂದ ಸಾಧ್ಯವಿಲ್ಲ. ಏಕೆಂದರೆ ಅಂಥ ಆಧ್ಯಾತ್ಮಿಕ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಒಂದು ಸುಯೋಗ ಮತ್ತು ಆ ಸುಯೋಗ ಎಲ್ಲರಿಗೂ ಸಿಗುವುದಿಲ್ಲ. ಈ ವಿಷಯದಲ್ಲಿ ಯೇಸು ಏನು ಹೇಳಿದ್ದಾನೆ ಅಂತ ನೋಡೋಣ.ಮತ್ತಾಯ 11:25 ಓದಿ.

ಈ ವಚನ “ಆ ಸಮಯದಲ್ಲಿ ಯೇಸು” ಎನ್ನುವ ಮಾತುಗಳಿಂದ ಆರಂಭವಾಗುತ್ತೆ. ಹಾಗಾದರೆ ಆಗ ತಾನೇ ಏನೋ ಒಂದು ಸಂಗತಿ ನಡೆದಿದೆ. ಆ ಸಮಯದಲ್ಲಿ ಏನು ನಡೆಯಿತು? ಯೇಸು ಪವಾಡ ನಡೆಸಿದ್ದರೂ ಶಿಷ್ಯರಾಗಲು ಯಾವುದೇ ಪ್ರತಿಕ್ರಿಯೆ ತೋರಿಸದ ಗಲಿಲಾಯದ ಮೂರು ಊರುಗಳ ಜನರನ್ನು ಗದರಿಸಿದ್ದನು. (ಮತ್ತಾಯ 11:20-24) ‘ಯೇಸುವಿನ ಪವಾಡಗಳನ್ನು ಕಣ್ಣಾರೆ ನೋಡಿದ್ರೂ ಅದ್ಹೇಗೆ ಆತನಲ್ಲಿ ನಂಬಿಕೆ ಇಡಲಿಲ್ಲ? ಆತನ ಅನುಯಾಯಿಗಳಾಗಲಿಲ್ಲ?’ ಎಂದು ನೀವು ನೆನಸಬಹುದು. ಅದಕ್ಕೆ ಕಾರಣ ಅವರ ಹಠಮಾರಿತನ.—ಮತ್ತಾಯ 13:10-15.

ದೇವರ ಕುರಿತು ಬೈಬಲಿನಲ್ಲಿರುವ ಸತ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಎರಡು ವಿಷಯಗಳು ಅಗತ್ಯವೆಂದು ಯೇಸು ತಿಳಿದಿದ್ದನು. (1) ದೇವರ ಸಹಾಯ (2) ಒಳ್ಳೇ ಹೃದಯ ಸ್ಥಿತಿ. ಯೇಸು ವಿವರಿಸುವುದು: “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಂದಲೂ ಜ್ಞಾನಿಗಳಿಂದಲೂ ಈ ವಿಷಯಗಳನ್ನು ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ.” ಆಧ್ಯಾತ್ಮಿಕ ವಿಷಯಗಳನ್ನು ಗ್ರಹಿಸಿಕೊಳ್ಳುವುದು ಒಂದು ಸುಯೋಗ ಅಂತ ಹೇಳಿದ್ದು ಯಾಕೆಂದು ಗೊತ್ತಾಗುತ್ತಿದೆಯಾ? ಯೆಹೋವ ದೇವರು “ಸ್ವರ್ಗ ಭೂಲೋಕಗಳ ಒಡೆಯ” ಆಗಿರುವುದರಿಂದ ಯಾರಿಗೆ ಸತ್ಯವನ್ನು ಪ್ರಕಟಪಡಿಸಬೇಕು ಅಂತ ನಿರ್ಣಯಿಸುವ ಅಧಿಕಾರ ಇದೆ. ಆದರೂ ದೇವರು ಪಕ್ಷಪಾತ ತೋರಿಸದೆ ಎಲ್ಲರಿಗೂ ಅವಕಾಶ ಕೊಡುತ್ತಾನೆ. ಹೀಗಿರಲಾಗಿ ದೇವರು ಬೈಬಲ್‌ ಸತ್ಯವನ್ನು ಕೆಲವರಿಗೆ ಪ್ರಕಟಪಡಿಸುವುದು ಮತ್ತು ಕೆಲವರಿಗೆ ಮರೆಮಾಡುವುದು ಯಾವ ಅರ್ಥದಲ್ಲಿ?

ಯೆಹೋವನು ನಮ್ರ ಜನರನ್ನು ಇಷ್ಟಪಡುತ್ತಾನೆ, ಅಹಂಕಾರಿಗಳನ್ನಲ್ಲ. (ಯಾಕೋಬ 4:6) “ವಿವೇಕಿಗಳಿಂದಲೂ ಜ್ಞಾನಿಗಳಿಂದಲೂ” ಸತ್ಯವನ್ನು ಮರೆಮಾಡುತ್ತಾನೆ. ಅಂದರೆ ಲೋಕದಲ್ಲಿ ಮೇಧಾವಿಗಳೆಂದು ಎನಿಸಿಕೊಂಡವರು ದೇವರ ಸಹಾಯದ ಅಗತ್ಯವಿಲ್ಲವೆನ್ನುವ ಅಹಂಕಾರಿಗಳಿಂದ ಮರೆಮಾಡುತ್ತಾನೆ. (1 ಕೊರಿಂಥ 1:19-21) ಆದರೆ “ಶಿಶುಗಳಿಗೆ” ಅಂದರೆ ನಮ್ರಭಾವ, ಮಗುವಿನಂಥ ಮನಸ್ಸು ಇರುವವರಿಗೆ ಸತ್ಯ ಪ್ರಕಟಪಡಿಸುತ್ತಾನೆ. (ಮತ್ತಾಯ 18:1-4; 1 ಕೊರಿಂಥ 1:26-28) ದೇವಪುತ್ರ ಯೇಸುವಿನ ಕಾಲದಲ್ಲೂ ಇಂಥ ಜನರಿದ್ದರು. ಅತಿ ವಿದ್ಯಾವಂತ ಅಹಂಕಾರಿ ಧರ್ಮಗುರುಗಳಿಗೆ ಯೇಸುವಿನ ಸಂದೇಶ ಅರ್ಥ ಆಗಿಲ್ಲ. ಆದರೆ ನಮ್ರ ಬೆಸ್ತರಿಗೆ ಅರ್ಥವಾಯಿತು. (ಮತ್ತಾಯ 4:18-22; 23:1-5; ಅಪೊಸ್ತಲರ ಕಾರ್ಯಗಳು 4:13) ನಮ್ರರಾಗಿದ್ದ ಕೆಲವು ಶ್ರೀಮಂತರು, ವಿದ್ಯಾವಂತರು ಸಹ ಯೇಸುವಿನ ಅನುಯಾಯಿಗಳಾದರು.—ಲೂಕ 19:1, 2, 8; ಅಪೊಸ್ತಲರ ಕಾರ್ಯಗಳು 22:1-3.

‘ದೇವರ ಕುರಿತು ಸತ್ಯ ತಿಳಿಯಲು ಬಯಸ್ತೀರಾ?’ ಅಂತ ಆರಂಭದಲ್ಲಿ ಒಂದು ಪ್ರಶ್ನೆ ಕೇಳಿದ್ವಿ. ಅದಕ್ಕೆ ನಿಮ್ಮ ಉತ್ತರವೇನು? ದೇವರ ಕೃಪೆಗೆ ಪಾತ್ರರಾಗುವವರು ಲೋಕದ ಮೇಧಾವಿಗಳಲ್ಲ. ಲೋಕದ ಮೇಧಾವಿಗಳು ಯಾರನ್ನ ತುಚ್ಛವಾಗಿ ನೋಡುತ್ತಾರೋ ಅಂಥ ಜನರು ದೇವರ ಅನುಗ್ರಹ ಪಡೆಯುತ್ತಾರೆ ಅನ್ನೋ ವಿಷಯ ತಿಳಿದು ನಿಮಗೆ ಖುಷಿಯಾಗಬಹುದು. ನಮ್ರತೆಯಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡುವ ನೀವೂ ಸತ್ಯವನ್ನು ತಿಳಿದುಕೊಳ್ಳುವ ಅಮೂಲ್ಯ ಕೊಡುಗೆಯನ್ನು ಪಡೆಯುವಿರಿ. ದೇವರ ಕುರಿತ ಸತ್ಯ ತಿಳಿದುಕೊಳ್ಳುವುದು ನಿಮ್ಮ ಬದುಕಿಗೆ ಒಂದು ಅರ್ಥ ಕೊಡುತ್ತೆ. ಅಲ್ಲದೆ ಭವಿಷ್ಯದಲ್ಲಿ “ವಾಸ್ತವವಾದ ಜೀವನ” ಅಂದರೆ ನೀತಿನ್ಯಾಯ ತುಂಬಿರುವ ಲೋಕದಲ್ಲಿ ಅನಂತಕಾಲ ಬದುಕುವ ಆಶೀರ್ವಾದ ಸಿಗುತ್ತೆ. *1 ತಿಮೊಥೆಯ 6:12, 19; 2 ಪೇತ್ರ 3:13. ▪ (w13-E 01/01)

ಶಿಫಾರಸು ಮಾಡಲಾಗಿರುವ ಬೈಬಲ್‌ ವಾಚನ ಭಾಗ

ಮತ್ತಾಯ 1 - ಲೂಕ 6

^ ಪ್ಯಾರ. 7 ದೇವರ ಬಗ್ಗೆ, ಆತನ ಸಂಕಲ್ಪಗಳ ಬಗ್ಗೆ ನಿಮಗೆ ಕಲಿಸಲು ಯೆಹೋವನ ಸಾಕ್ಷಿಗಳು ಸದಾಸಿದ್ಧರು. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದಿಂದ ನಿಮಗೆ ಉಚಿತವಾಗಿ ಕಲಿಸಿಕೊಡುತ್ತಾರೆ.