ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಗೆ

ವಾಚಕರಿಗೆ

ನಿಮ್ಮ ಕೈಯಲ್ಲಿರುವ ಈ ಪತ್ರಿಕೆ ಮೊತ್ತಮೊದಲು ಇಂಗ್ಲಿಷ್‌ ಭಾಷೆಯಲ್ಲಿ 1879 ಜುಲೈ ತಿಂಗಳಿನಲ್ಲಿ ಪ್ರಕಟಗೊಂಡಿತು. ಕಾಲ ಬದಲಾದಂತೆ ಈ ಪತ್ರಿಕೆ ಕೂಡ ಬದಲಾಗ ತೊಡಗಿತು. (ಮೇಲಿರುವ ಚಿತ್ರ ನೋಡಿ.) ಈ ಸಂಚಿಕೆಯಿಂದ ಆರಂಭಿಸಿ ಕಾವಲಿನಬುರುಜು ಪತ್ರಿಕೆಯಲ್ಲಿ ಇನ್ನಷ್ಟು ಬದಲಾವಣೆ ಆಗಲಿದೆ. ಏನು ಬದಲಾವಣೆ ಅಂತ ಕೇಳ್ತಿರಾ?

ಯಾಕೆಂದರೆ ಯಾವುದೇ ಮಾಹಿತಿ ಬೇಕಿದ್ದರೂ ಜನರು ಇಂಟರ್‌ನೆಟ್‌ನ ಮೊರೆಹೋಗುವುದೇ ಹೆಚ್ಚು. ಒಂದೇ ಒಂದು ಗುಂಡಿ ಒತ್ತಿದರೆ ಸಾಕು ಅವರಿಗೆ ಸಾವಿರಾರು ಮಾಹಿತಿಗಳು ಸಿಗುತ್ತೆ. ಬೇರೆಲ್ಲೂ ಸಿಗದ ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಸಿಗುತ್ತೆ. ಅನೇಕ ಜನರು ಪುಸ್ತಕಗಳು, ಪತ್ರಿಕೆಗಳು, ವಾರ್ತಾ ಪತ್ರಿಕೆಗಳನ್ನು ಸಹ ಇಂಟರ್‌ನೆಟ್‌ನಲ್ಲೇ ಓದುತ್ತಾರೆ.

ಈ ವಿಷಯವನ್ನು ಮನಸ್ಸಿನಲ್ಲಿಟ್ಟು ಇತ್ತೀಚಿಗೆ ನಮ್ಮ www.ps8318.com ವೆಬ್‌ ಸೈಟ್‌ ಅನ್ನು ಪುನರ್ವಿನ್ಯಾಸಿಸಿದೆವು. ಇದು ಈಗ ಇನ್ನಷ್ಟು ಆಕರ್ಷಕವಾಗಿದೆ. ಉಪಯೋಗಿಸಲು ಸುಲಭವಾಗಿದೆ. ನಮ್ಮ ಈ ವೆಬ್‌ ಸೈಟ್‌ನಲ್ಲಿ 430ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶನಗಳು ಲಭ್ಯವಿದೆ. ಅಲ್ಲದೆ ಈ ಪತ್ರಿಕೆಗಳಲ್ಲಿ ಬರುವ ಕೆಲವು ನಿಯತ ಲೇಖನಗಳು ಇನ್ನು ಮುಂದೆ ವೆಬ್‌ ಸೈಟ್‌ನಲ್ಲಿ ಮಾತ್ರ ಲಭ್ಯವಿರುತ್ತೆ. *

ಹೆಚ್ಚಿನ ಲೇಖನಗಳನ್ನು ಇಂಟರ್‌ನೆಟ್‌ನಲ್ಲಿ ಲಭ್ಯಗೊಳಿಸುವುದರಿಂದ ಈ ಸಂಚಿಕೆಯಿಂದ ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿಯ ಪುಟಗಳನ್ನು 32ರಿಂದ 16ಕ್ಕೆ ಕಡಿತಗೊಳಿಸಲಾಗಿದೆ. ಈಗಾಗಲೇ ಕಾವಲಿನಬುರುಜು ಪತ್ರಿಕೆ 204 ಭಾಷೆಗಳಲ್ಲಿ ಪ್ರಕಾಶನಗೊಂಡಿದೆ. ಈಗ ಪುಟಗಳನ್ನು ಕಡಿತಗೊಳಿಸಿರುವುದರಿಂದ ಇನ್ನು ಹೆಚ್ಚು ಭಾಷೆಗಳಲ್ಲಿ ತರ್ಜುಮೆ ಮಾಡುವ ಸಾಧ್ಯತೆಯಿದೆ.

ಈ ಬದಲಾವಣೆಗಳಿಂದಾಗಿ ಹೆಚ್ಚೆಚ್ಚು ಜನರಿಗೆ ಬೈಬಲ್‌ ಸಂದೇಶವನ್ನು ಮುಟ್ಟಿಸಲು ಸಾಧ್ಯವಾಗುತ್ತೆ ಅಂತ ನಿರೀಕ್ಷಿಸುತ್ತೇವೆ. ಬೈಬಲ್‌ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವ ಜನರಿಗೋಸ್ಕರ ಮುದ್ರಿತ ಪುಟಗಳಲ್ಲಿ ಹಾಗೂ ಇಂಟರ್‌ನೆಟ್‌ನಲ್ಲಿ ಹೆಚ್ಚೆಚ್ಚು ಹೊಸ ಹಾಗೂ ಆಸಕ್ತಿಕರ ಮಾಹಿತಿಯನ್ನು ಸತತವಾಗಿ ಒದಗಿಸಲು ದೃಢಸಂಕಲ್ಪ ಮಾಡಿದ್ದೇವೆ. (w13-E 01/01)

ಪ್ರಕಾಶಕರು

^ ಪ್ಯಾರ. 5 ಇಂಟರ್‌ನೆಟ್‌ನಲ್ಲಿ ಮಾತ್ರ ಲಭ್ಯವಿರುವ ಲೇಖನಗಳಲ್ಲಿ ಕೆಲವು: “ಫಾರ್‌ ಯಂಗ್‌ ಪೀಪಲ್‌”—ಇದರಲ್ಲಿ ಮಕ್ಕಳಿಗೆ ಅಂತ ಕೆಲವು ಬೈಬಲ್‌ ಪ್ರಾಜೆಕ್ಟ್‌ಗಳಿರುತ್ತೆ. “ಮೈ ಬೈಬಲ್‌ ಲೆಸನ್ಸ್‌”—ಇದು ಮೂರು ವರ್ಷದೊಳಗಿನ ಮಕ್ಕಳಿಗೆ ಕಲಿಸಲು ವಿನ್ಯಾಸಿಸಿರುವ ಲೇಖನ. (ಸದ್ಯಕ್ಕೆ ಕನ್ನಡದಲ್ಲಿ ಲಭ್ಯವಿಲ್ಲ.)