ಯೆರೂಸಲೇಮ್ ಮತ್ತು ಸೊಲೊಮೋನನ ಆಲಯ
ಯೆರೂಸಲೇಮ್ ಮತ್ತು ಸೊಲೊಮೋನನ ಆಲಯ
ಅದನ್ನು “ರಮಣೀಯ”ವೆಂದೂ “ರಾಜಾಧಿರಾಜನ ಪಟ್ಟಣ” ವೆಂದೂ ಕರೆಯಲಾಗುತ್ತಿತ್ತು. (ಕೀರ್ತ 48:2; 50:2; ಪ್ರಲಾ 2:15) ಯೆರೂಸಲೇಮ್, ದೇವರ ಜನಾಂಗದ ರಾಜಧಾನಿಯಾಗಿತ್ತು. (ಕೀರ್ತ 76:2) ದಾವೀದನು ಆ ನಗರವನ್ನು ಯೆಬೂಸಿಯರಿಂದ ವಶಪಡಿಸಿಕೊಂಡು ತನ್ನ ರಾಜಧಾನಿಯಾಗಿ ಮಾಡಿಕೊಂಡ ನಂತರ, ಅದನ್ನು “ದಾವೀದನಗರ” ಇಲ್ಲವೆ ಬರೀ “ಚೀಯೋನ್” ಎಂದು ಕರೆಯಲಾಯಿತು.—2ಸಮು 5:7.
ಯೆರೂಸಲೇಮು ಯುದ್ಧ ನಿರ್ವಹಣೆಗಾಗಿ ಅತ್ಯುತ್ತಮವಾದ ಸ್ಥಾನದಲ್ಲಿ ನೆಲೆಸಿರದಿದ್ದರೂ, ಅದು ಪ್ರಸಿದ್ಧಿಯನ್ನು ಗಳಿಸಿತು, ಯಾಕೆಂದರೆ ದೇವರು ಅಲ್ಲಿ ತನ್ನ ಹೆಸರನ್ನು ಸ್ಥಾಪಿಸಿದನು. (ಧರ್ಮೋ 26:2) ಅದು ಇಡೀ ಜನಾಂಗದ ಧಾರ್ಮಿಕ ಹಾಗೂ ಆಡಳಿತ ಕೇಂದ್ರವಾಗಿತ್ತು.
ಯೆರೂಸಲೇಮ್ ಯೂದಾಯದ ಕೇಂದ್ರೀಯ ಪರ್ವತಶ್ರೇಣಿಯಲ್ಲಿದ್ದು, 750 ಮೀಟರ್ ಔನ್ನತ್ಯದಲ್ಲಿದೆ. ಅದು ‘ಉನ್ನತವಾಗಿದೆ’ ಎಂದೂ, ಆರಾಧಕರು ಅದನ್ನು ತಲಪಲಿಕ್ಕಾಗಿ—ಮೂಲ ಭಾಷೆಗನುಸಾರ—‘ಮೇಲೆ ಹೋಗುತ್ತಾರೆ’ ಎಂದೂ ಬೈಬಲು ತಿಳಿಸುತ್ತದೆ. (ಕೀರ್ತ 48:2; 122:3, 4) ಆ ಪ್ರಾಚೀನ ನಗರವು ಕಣಿವೆಗಳಿಂದ ಸುತ್ತುವರಿಯಲ್ಪಟ್ಟಿತ್ತು: ಪಶ್ಚಿಮ ಮತ್ತು ದಕ್ಷಿಣದಲ್ಲಿ ಹಿನ್ನೋಮ್ ತಗ್ಗು ಇತ್ತು ಹಾಗೂ ಪೂರ್ವದಲ್ಲಿ ಕಿದ್ರೋನ್ ಹಳ್ಳವಿತ್ತು. (2ಅರ 23:10; ಯೆರೆ 31:40) ಕಿದ್ರೋನ್ ತೊರೆ ಕಣಿವೆಯಲ್ಲಿದ್ದ ಗೀಹೋನ್ ಬುಗ್ಗೆಯು, * ಮತ್ತು ದಕ್ಷಿಣದಲ್ಲಿದ್ದ ಏನ್‌ರೋಗೆಲ್ ಬುಗ್ಗೆಯು ಸಿಹಿ ನೀರನ್ನು ಒದಗಿಸಿದವು, ಮತ್ತು ಇದು ವಿಶೇಷವಾಗಿ ಶತ್ರುಗಳ ದಾಳಿಗಳ ಸಮಯದಲ್ಲಿ ಅತ್ಯಾವಶ್ಯಕವಾಗಿತ್ತು.—2ಸಮು 17:17.
ಪುಟ 21ರಲ್ಲಿರುವ ರೇಖಕೃತಿಯಲ್ಲಿ, ದಾವೀದನಗರವು ಕೆಂಪು ಬಣ್ಣದಲ್ಲಿದೆ. ದಾವೀದ ಮತ್ತು ಸೊಲೊಮೋನರ ಆಳ್ವಿಕೆಯ ಸಮಯದಲ್ಲಿ ಈ ನಗರವು ಓಫೇಲಿನ (ಹಸಿರು) ಮತ್ತು ಮೊರೀಯ ಬೆಟ್ಟದ (ನೀಲಿ) ವರೆಗೂ ವಿಸ್ತರಿಸಿತು. (2ಸಮು 5:7-9; 24:16-25) ಪರ್ವತದ ಆ ಹೆಚ್ಚು ಉನ್ನತವಾದ ಸ್ಥಳದಲ್ಲಿ ಸೊಲೊಮೋನನು ಯೆಹೋವನಿಗಾಗಿ ಒಂದು ವೈಭವಯುತವಾದ ಆಲಯವನ್ನು ಕಟ್ಟಿದನು. ವಾರ್ಷಿಕ ಹಬ್ಬಗಳಿಗಾಗಿ ಆರಾಧಕರ ದೊಡ್ಡ ಹಿಂಡುಗಳು “ಯೆಹೋವನ ಪರ್ವತಕ್ಕೆ” ಹೋಗುತ್ತಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿರಿ! (ಜೆಕ 8:3) ಪುಟ 17ರಲ್ಲಿ ತೋರಿಸಲ್ಪಟ್ಟಿರುವ ರಸ್ತೆಗಳ ಸಂಕೀರ್ಣ ವ್ಯವಸ್ಥೆಯು ಇಂಥ ಪ್ರಯಾಣವನ್ನು ಸುಗಮಗೊಳಿಸಿತು.
ಚಿನ್ನ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದ ಸೊಲೊಮೋನನ ಆಲಯವು, ಕಟ್ಟಲ್ಪಟ್ಟಿರುವ ಅತ್ಯಂತ ದುಬಾರಿ ಕಟ್ಟಡಗಳಲ್ಲೇ ಒಂದಾಗಿದೆ. ಗಮನಾರ್ಹ ಸಂಗತಿಯೇನೆಂದರೆ, ಯೆಹೋವನೇ ಅದರ ವಾಸ್ತುಶಿಲ್ಪೀಯ ಯೋಜನೆಯನ್ನು ಒದಗಿಸಿದನು. ಈ ಚಿತ್ರಣದಲ್ಲಿ ನೀವು ನೋಡಬಹುದಾದಂತೆ, ಆ ಆಲಯದ ಅಕ್ಕಪಕ್ಕದಲ್ಲಿ ದೊಡ್ಡದಾದ ಪ್ರಾಕಾರಗಳು ಮತ್ತು ಆಡಳಿತ ಕಟ್ಟಡಗಳು ಇದ್ದವು. ಅದರ ವಿವರಗಳ ಬಗ್ಗೆ ಅಧ್ಯಯನಮಾಡಲು ನೀವು ಸಮಯ ತೆಗೆದುಕೊಳ್ಳುವುದು ಸಾರ್ಥಕವಾಗಿರುವುದು.—1ಅರ 6:1–7:51; 1ಪೂರ್ವ 28:11-19; ಇಬ್ರಿ 9:23, 24.
[ಪಾದಟಿಪ್ಪಣಿ]
^ ಪ್ಯಾರ. 4 ರಾಜ ಹಿಜ್ಕೀಯನು ಈ ಬುಗ್ಗೆಗೆ ಕಟ್ಟೆಕಟ್ಟಿಸಿ ಅದರ ನೀರು ಪಶ್ಚಿಮತೀರದಲ್ಲಿರುವ ಒಂದು ಕೊಳಕ್ಕೆ ಹರಿಯುವಂತೆ ಒಂದು ಸುರಂಗವನ್ನು ಕಟ್ಟಿದನು.—2ಪೂರ್ವ 32:4, 30.
[ಪುಟ 21ರಲ್ಲಿರುವ ಚೌಕ]
ಸಕಾಲದಲ್ಲಿ, ಯೆರೂಸಲೇಮ್ ಪಶ್ಚಿಮಕ್ಕೂ ಉತ್ತರಕ್ಕೂ ವಿಸ್ತರಿಸಿತು. ಸೊಲೊಮೋನನ ನಂತರದ ಯೂದಾಯದ ಅರಸರು ಗೋಡೆಗಳನ್ನೂ ದ್ವಾರಗಳನ್ನೂ ಕೂಡಿಸಿದರು. ಮುಂದುವರಿಯುತ್ತಿರುವ ಪ್ರಾಕ್ತನಶಾಸ್ತ್ರೀಯ ಸಂಶೋಧನೆಯು, ಆ ಗೋಡೆಗಳ ಸರಿಯಾದ ಸ್ಥಾನ ಮತ್ತು ವಿಸ್ತಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಬಹುದು. ಆ ನಗರವು ಸಾ.ಶ.ಪೂ. 607ರಲ್ಲಿ ನಾಶಗೊಳಿಸಲ್ಪಟ್ಟಿತು ಮತ್ತು 70 ವರ್ಷಗಳ ವರೆಗೆ ಪಾಳುಬಿದ್ದಿತ್ತು. ಯೆಹೂದ್ಯರು ಅಲ್ಲಿಗೆ ಹಿಂದಿರುಗಿ 80 ವರ್ಷಗಳು ಕಳೆದ ನಂತರ, ನೆಹೆಮೀಯನು ಯೆರೂಸಲೇಮಿನ ಗೋಡೆಗಳ ವಿಸ್ತಾರವಾದ ಪುನರ್ನಿರ್ಮಾಣ ಕೆಲಸದಲ್ಲಿ ತೊಡಗಿದನು.
[ಪುಟ 21ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಯೆರೂಸಲೇಮ್/ಸೊಲೊಮೋನನ ಆಲಯ
ಸೊಲೊಮೋನನ ಸಮಯದಲ್ಲಿ ಆಲಯ ಕ್ಷೇತ್ರ
ಆಲಯದ ವೈಶಿಷ್ಟ್ಯಗಳು
1. ಮಹಾಪವಿತ್ರಸ್ಥಾನ
2. ಪವಿತ್ರಸ್ಥಾನ
3. ಮಂಟಪ
4. ಬೋವಜ್
5. ಯಾಕೀನ್
6. ತಾಮ್ರದ ಯಜ್ಞವೇದಿ
7. ಸಮುದ್ರವೆನಿಸಿಕೊಳ್ಳುವ ಎರಕದ ಪಾತ್ರೆ
8. ಬಂಡಿಗಳು (ಪೀಠಗಳು)
9. ಕೊಠಡಿಗಳು
10. ಭೋಜನಶಾಲೆಗಳು
11. ಒಳಗಣ ಪ್ರಾಕಾರ
ಆಲಯ ಕ್ಷೇತ್ರ
ಮೊರೀಯ ಬೆಟ್ಟ
ಭೋಜನಶಾಲೆಗಳು
ಬಂಡಿಗಳು (ಪೀಠಗಳು)
ಕೊಠಡಿಗಳು
ಮಹಾಪವಿತ್ರಸ್ಥಾನ ಬೋವಜ್
ಪವಿತ್ರಸ್ಥಾನ ತಾಮ್ರದ ಒಳಗಣ
ಯಾಕೀನ್ ಯಜ್ಞವೇದಿ ಪ್ರಾಕಾರ
ಬಂಡಿಗಳು (ಪೀಠಗಳು) ಸಮುದ್ರವೆನಿಸಿಕೊಳ್ಳುವ
ಎರಕದ ಪಾತ್ರೆ
ಓಫೇಲ್
ಸಾರ್ವಜನಿಕ ಚೌಕ?
ನೀರು ಬಾಗಿಲು?
ದಾವೀದನಗರ
ಚೀಯೋನ್ ಬೆಟ್ಟ
ದಾವೀದನ ಅರಮನೆ
ಬುಗ್ಗೆಬಾಗಿಲು
ಮನಸ್ಸೆಯ ಗೋಡೆ?
ಹನನೇಲ್ ಬುರುಜು
ಹಮ್ಮೆಯಾ ಬುರುಜು
ಕುರಿಬಾಗಿಲು
ಸೆರೆಮನೆಯ ಬಾಗಿಲು
ದಂಡುಕೊಡುವ ಬಾಗಿಲು
ಕುದುರೆಬಾಗಿಲು
ಕಿದ್ರೋನ್ ಹಳ್ಳ
ಕೆಳಗಿನ ಗೋಡೆ?
ಗೀಹೋನ್
ನಂತರದ ನೀರಿನ ಸುರಂಗ
ತುರೋಪಿಯನ್ ತಗ್ಗು
ತಿಪ್ಪೆಬಾಗಿಲು (ಬೋಕಿಯ)
ಏನ್‌ರೋಗೆಲ್
ತಗ್ಗಿನ ಬಾಗಿಲು
ಹಿನ್ನೋಮ್ ತಗ್ಗು
ಮೂಲೆಯ ಬಾಗಿಲು
ಒಲೆಬುರುಜು
ಅಗಲ ಗೋಡೆ
ಎಫ್ರಾಯೀಮ್ ಬಾಗಿಲು
ಸಾರ್ವಜನಿಕ ಚೌಕ?
ಹಳೆಯದು ಎಂಬ ಬಾಗಿಲು
ಆರಂಭದ ಉತ್ತರ ಗೋಡೆ
ಎರಡನೆಯ ಕೇರಿ
ಮೀನುಬಾಗಿಲು
[ಚಿತ್ರ]
ಓಫೇಲ್
ಫರೋಹನ ಮಗಳ ಮನೆ
ಸೊಲೊಮೋನನ ಅರಮನೆ
ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರ
ಕಂಬಮಂಟಪ
ಸಿಂಹಾಸನಮಂದಿರ
ಮೊರೀಯ ಬೆಟ್ಟ
ದೊಡ್ಡ ಪ್ರಾಕಾರ
ಆಲಯ
[ಪುಟ 20ರಲ್ಲಿರುವ ಚಿತ್ರ]
ಮುನ್ನೆಲೆ ಕ್ಷೇತ್ರವು, “ದಾವೀದನಗರವು” ಇದ್ದ ಸ್ಥಾನವಾಗಿದೆ. ಆಲಯವು ಸಮತಲವಾಗಿರುವ ಕ್ಷೇತ್ರದಲ್ಲಿತ್ತು (ಹಿನ್ನೆಲೆ)
[ಪುಟ 20ರಲ್ಲಿರುವ ಚಿತ್ರ]
ಪ್ರಾಚೀನಕಾಲದ “ದಾವೀದನಗರ” ಮತ್ತು ಸೊಲೊಮೋನನ ಆಲಯದ ಕಂಪ್ಯೂಟರ್ ಚಿತ್ರಣ