ಕೀರ್ತನೆ 143:1-12
ದಾವೀದನ ಮಧುರ ಗೀತೆ.
143 ಯೆಹೋವ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು.
ನೀನು ನಂಬಿಗಸ್ತ, ನೀತಿವಂತ.
ಹಾಗಾಗಿ ನನಗೆ ಉತ್ರ ಕೊಡು.
2 ನಿನ್ನ ಸೇವಕನನ್ನ ನಿನ್ನ ನ್ಯಾಯಾಲಯದ ಮುಂದೆ ತರಬೇಡ,ಯಾಕಂದ್ರೆ ಬದುಕಿರೋರಲ್ಲಿ ಯಾರೂ ನಿನ್ನ ಮುಂದೆ ನೀತಿವಂತರಲ್ಲ.+
3 ಶತ್ರು ನನ್ನನ್ನ ಅಟ್ಟಿಸ್ಕೊಂಡು ಬರ್ತಿದ್ದಾನೆ.
ಅವನು ನನ್ನನ್ನ ನೆಲಕ್ಕೆ ಹಾಕಿ ತುಳಿದು ಬಿಟ್ಟಿದ್ದಾನೆ.
ಎಷ್ಟೋ ವರ್ಷಗಳ ಮುಂಚೆನೇ ಸತ್ತು ಹೋಗಿರೋರ ತರ ನಾನಾಗಿದ್ದೀನಿ.
ಅವನು ನನ್ನನ್ನ ಕತ್ತಲಲ್ಲಿ ವಾಸಿಸೋ ಹಾಗೆ ಮಾಡಿದ್ದಾನೆ.
4 ನಾನು ಬೇಜಾರಾಗಿದ್ದೀನಿ, ನನಗೆ ಶಕ್ತಿನೇ ಇಲ್ಲ.+
ನನ್ನ ಹೃದಯ ಮರಗಟ್ಟಿ ಹೋಗಿದೆ.+
5 ಕಳೆದು ಹೋದ ದಿನಗಳನ್ನ ನಾನು ನೆನಪಿಸ್ಕೊಳ್ತೀನಿ,ನಿನ್ನ ಎಲ್ಲ ಕೆಲಸಗಳ ಬಗ್ಗೆ ನಾನು ಧ್ಯಾನಿಸ್ತೀನಿ,+ನಿನ್ನ ಕೈಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.*
6 ನಾನು ನಿನ್ನ ಮುಂದೆ ನನ್ನ ಕೈ ಚಾಚ್ತೀನಿ,ಒಣಗಿದ ನೆಲ ಮಳೆಗಾಗಿ ಬಾಯಾರಿರೋ ತರ ನಾನು ನಿನಗಾಗಿ ಬಾಯಾರಿದ್ದೀನಿ.+ (ಸೆಲಾ)
7 ಯೆಹೋವ, ಬೇಗ ಉತ್ರ ಕೊಡು,+ಇದ್ರ ಮೇಲೆ ನನಗೆ ಇನ್ನು ತಾಳಿಕೊಳ್ಳೋಕಾಗಲ್ಲ.+
ನಿನ್ನ ಮುಖವನ್ನ ನನ್ನಿಂದ ಮರೆ ಮಾಡ್ಕೊಬೇಡ,+ನೀನು ಮರೆ ಮಾಡ್ಕೊಂಡ್ರೆ ನನ್ನ ಗತಿ ಸಮಾಧಿಗೆ* ಸೇರಿದವರ ತರ ಆಗಿಬಿಡುತ್ತೆ.+
8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.
ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.
9 ಯೆಹೋವ, ನನ್ನ ಶತ್ರುಗಳಿಂದ ನನ್ನನ್ನ ಕಾಪಾಡು.
ರಕ್ಷಣೆಗಾಗಿ ನಾನು ನಿನ್ನ ಹತ್ರ ಓಡಿ ಬಂದಿದ್ದೀನಿ.+
10 ನಿನಗೆ ಏನು ಇಷ್ಟಾನೋ ಅದನ್ನ ಮಾಡೋಕೆ ನನಗೆ ಕಲಿಸು,+ಯಾಕಂದ್ರೆ ನೀನೇ ನನ್ನ ದೇವರು.
ನೀನು ಒಳ್ಳೆಯವನು.
ನೀನು ನನ್ನನ್ನ ನಿನ್ನ ಪವಿತ್ರಶಕ್ತಿಯಿಂದ ಸಮ ನೆಲದ ಮೇಲೆ* ನಡಿಸು.
11 ಯೆಹೋವ, ನಿನ್ನ ಹೆಸ್ರಿಂದಾಗಿ ನನ್ನನ್ನ ಜೀವಂತವಾಗಿ ಉಳಿಸು.
ನಿನ್ನ ನೀತಿಯಿಂದಾಗಿ ನನ್ನನ್ನ ಕಷ್ಟದಿಂದ ಬಿಡಿಸು.+
12 ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಶತ್ರುಗಳಿಗೆ ಅಂತ್ಯ ಹಾಡು,*+ನನಗೆ ಕಿರುಕುಳ ಕೊಡೋರನ್ನ ನಾಶಮಾಡು,+ಯಾಕಂದ್ರೆ ನಾನು ನಿನ್ನ ಸೇವಕ.+
ಪಾದಟಿಪ್ಪಣಿ
^ ಅಥವಾ “ಅಧ್ಯಯನ ಮಾಡ್ತೀನಿ.”
^ ಅಥವಾ “ಗುಂಡಿಗೆ.”
^ ಅಥವಾ “ಪ್ರಾಮಾಣಿಕತೆಯ ದೇಶದಲ್ಲಿ.”
^ ಅಕ್ಷ. “ನಿಶ್ಶಬ್ದ ಮಾಡು.”