ಕೀರ್ತನೆ 53:1-6
ಗಾಯಕರ ನಿರ್ದೇಶಕನಿಗೆ ಸೂಚನೆ: ಮಹಾಲತ್* ಶೈಲಿಯಲ್ಲಿ ರಚಿಸಲಾಗಿದೆ. ಮಸ್ಕಿಲ್.* ದಾವೀದನ ಕೀರ್ತನೆ.
53 ಮೂರ್ಖ* ತನ್ನ ಹೃದಯದಲ್ಲಿ,
“ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+
ಅಂಥ ಜನ್ರ ಕೆಲಸ ಭ್ರಷ್ಟ, ಅಸಹ್ಯ.
ಯಾರೂ ಒಳ್ಳೇದನ್ನ ಮಾಡ್ತಿಲ್ಲ.+
2 ಆದ್ರೆ ಯಾರಿಗೆ ತಿಳುವಳಿಕೆ* ಇದೆ,ಯಾರು ಯೆಹೋವನನ್ನ ಹುಡುಕ್ತಿದ್ದಾರೆ,+ಅಂತ ತಿಳ್ಕೊಳ್ಳೋಕೆ ದೇವರು ಸ್ವರ್ಗದಿಂದ ನೋಡ್ತಾನೆ.+
3 ಅವ್ರೆಲ್ಲ ದಾರಿತಪ್ಪಿದ್ದಾರೆ,ಭ್ರಷ್ಟಾಚಾರ ಮಾಡದಿರೋರು ಒಬ್ರೂ ಇಲ್ಲ.
ಯಾರೂ ಒಳ್ಳೇದನ್ನ ಮಾಡ್ತಿಲ್ಲ,ಒಬ್ಬನೂ ಮಾಡ್ತಿಲ್ಲ.+
4 ಕೆಟ್ಟದನ್ನ ಮಾಡೋರಿಗೆ ಗೊತ್ತಾಗಲ್ವಾ?
ಅವರು ನನ್ನ ಜನ್ರನ್ನ ರೊಟ್ಟಿ ತರ ನುಂಗ್ತಾರೆ.
ಅವರು ಯೆಹೋವನಿಗೆ ಪ್ರಾರ್ಥನೆ ಮಾಡಲ್ಲ.+
5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.
ಈ ಮುಂಚೆ ಆಗದಷ್ಟು ಭಯ ಈಗ ಅವರಿಗಾಗುತ್ತೆ,*ಯಾಕಂದ್ರೆ ನಿನ್ನ ಮೇಲೆ ಆಕ್ರಮಣ ಮಾಡೋರ* ಎಲುಬುಗಳನ್ನ ದೇವರು ಚೆಲ್ಲಾಪಿಲ್ಲಿ ಮಾಡ್ತಾನೆ.
ಯೆಹೋವ ಅವ್ರನ್ನ ತಳ್ಳಿಬಿಟ್ಟಿರೋದ್ರಿಂದ ನೀನು ಅವ್ರಿಗೆ ಅವಮಾನ ಆಗೋ ತರ ಮಾಡ್ತೀಯ.
6 ಚೀಯೋನಿಂದ ಇಸ್ರಾಯೇಲ್ಯರಿಗೆ ರಕ್ಷಣೆ ಬರಲಿ!+
ಜೈಲಲ್ಲಿರೋ ಜನ್ರನ್ನ ಯೆಹೋವ ಒಟ್ಟುಸೇರಿಸುವಾಗ,ಯಾಕೋಬ ಖುಷಿಪಡಲಿ, ಇಸ್ರಾಯೇಲ್ ಉಲ್ಲಾಸಪಡಲಿ.
ಪಾದಟಿಪ್ಪಣಿ
^ ಅಥವಾ “ಬುದ್ಧಿ ಇಲ್ಲದವನು.”
^ ಅಕ್ಷ. “ಒಳನೋಟ.”
^ ಬಹುಶಃ, “ಹೆದರೋಕೆ ಕಾರಣ ಇಲ್ಲದಿದ್ರೂ ಹೆದರ್ತಾರೆ.”
^ ಅಕ್ಷ. “ನಿನ್ನ ವಿರುದ್ಧ ಪಾಳೆಯ ಹಾಕೋರ.”