ಕೀರ್ತನೆ 56:1-13
ಗಾಯಕರ ನಿರ್ದೇಶಕನಿಗೆ ಸೂಚನೆ, “ದೂರದ ಮೌನ ಪಾರಿವಾಳ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್.* ಗತ್‌ನಲ್ಲಿ+ ಫಿಲಿಷ್ಟಿಯರು ದಾವೀದನನ್ನ ವಶ ಮಾಡ್ಕೊಂಡಾಗ ರಚಿಸಿದ ಕೀರ್ತನೆ.
56 ದೇವರೇ, ನನಗೆ ಕೃಪೆ ತೋರಿಸು. ಯಾಕಂದ್ರೆ ನಾಶವಾಗಿ ಹೋಗೋ ಮನುಷ್ಯ ನನ್ನ ಮೇಲೆ ಆಕ್ರಮಣ ಮಾಡ್ತಿದ್ದಾನೆ.*
ಇಡೀ ದಿನ ಅವರು ನನ್ನ ಜೊತೆ ಹೋರಾಡ್ತಾರೆ, ನನ್ನ ಮೇಲೆ ದಬ್ಬಾಳಿಕೆ ಮಾಡ್ತಾರೆ.
2 ನನ್ನ ವೈರಿಗಳು ಇಡೀ ದಿನ ನನ್ನ ಮೇಲೆ ಆಕ್ರಮಣ ಮಾಡ್ತಾರೆ,ತುಂಬ ಜನ ಅಹಂಕಾರದಿಂದ ನನ್ನ ವಿರುದ್ಧ ಹೋರಾಡ್ತಾರೆ.
3 ನನಗೆ ಭಯ ಆದಾಗ+ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.+
4 ನಾನು ಯಾರ ಮಾತನ್ನ ಹೊಗಳ್ತೀನೋ, ಆ ದೇವರಲ್ಲಿಹೌದು, ಆ ದೇವರಲ್ಲಿ ನಾನು ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.
ಮಾಮೂಲಿ ಮನುಷ್ಯ* ನನಗೆ ಏನು ಮಾಡಕ್ಕಾಗುತ್ತೆ?+
5 ಇಡೀ ದಿನ ಅವರು ನನಗೆ ತೊಂದ್ರೆ ಕೊಡ್ತಾರೆ,ನನಗೆ ಹಾನಿ ಮಾಡಬೇಕು ಅನ್ನೋ ಯೋಚನೆ ಬಿಟ್ರೆ ಬೇರೆ ಯಾವ ಯೋಚನೆನೂ ಅವ್ರಿಗಿಲ್ಲ.+
6 ಅವರು ನನ್ನ ಮೇಲೆ ಆಕ್ರಮಣ ಮಾಡೋಕೆ ಬಚ್ಚಿಟ್ಕೊಂತಾರೆ,ಅವಕಾಶ ಸಿಕ್ಕಿದ ತಕ್ಷಣ ನನ್ನ ಪ್ರಾಣ ತೆಗೀಬೇಕು ಅಂತ+ಅವರು ನನ್ನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸ್ತಾರೆ.+
7 ಅವರು ದುಷ್ಟರಾಗಿ ಇರೋದ್ರಿಂದ ಅವ್ರನ್ನ ತಳ್ಳಿಬಿಡು.
ದೇವರೇ, ನಿನ್ನ ಕೋಪದಿಂದ ಜನ್ರನ್ನ ಬೀಳಿಸು.+
8 ಅಲೆಮಾರಿಯಾಗಿದ್ದಾಗ ನಾನು ಅನುಭವಿಸಿದ ಕಷ್ಟಗಳ ಲೆಕ್ಕವನ್ನ ನೀನು ಇಡ್ತೀಯ.+
ನಿನ್ನ ಚರ್ಮದ ಚೀಲದಲ್ಲಿ ನನ್ನ ಕಣ್ಣೀರನ್ನ ಕೂಡಿಸು.+
ಅವೆಲ್ಲ ನಿನ್ನ ಪುಸ್ತಕದಲ್ಲಿ ಇಲ್ವಾ?+
9 ನಾನು ಸಹಾಯಕ್ಕಾಗಿ ಕೂಗೋ ದಿನ ನನ್ನ ಶತ್ರುಗಳು ವಾಪಸ್ ಹೋಗ್ತಾರೆ.+
ದೇವರು ನನ್ನ ಪಕ್ಷದಲ್ಲಿದ್ದಾನೆ. ಇದ್ರ ಮೇಲೆ ನನಗೆ ಯಾವ ಸಂಶಯನೂ ಇಲ್ಲ.+
10 ನಾನು ಯಾರ ಮಾತನ್ನ ಹೊಗಳ್ತೀನೋ ಆ ದೇವರಲ್ಲಿ,ನಾನು ಯಾರ ನುಡಿಯನ್ನ ಸ್ತುತಿಸ್ತೀನೋ ಆ ಯೆಹೋವನಲ್ಲಿ
11 ಹೌದು, ಆ ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.+
ನಾಶವಾಗೋ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+
12 ದೇವರೇ, ನಾನು ಹೊತ್ತ ಹರಕೆಗಳನ್ನ ತೀರಿಸೋದು ನನ್ನ ಕರ್ತವ್ಯ,+ನಾನು ನಿನಗೆ ಧನ್ಯವಾದ ಹೇಳ್ತೀನಿ.+
13 ಯಾಕಂದ್ರೆ ನೀನು ನನ್ನನ್ನ ಸಾವಿನ ಬಾಯಿಂದ ಬಿಡಿಸಿದೆ,+ನಾನು ಜೀವಂತವಾಗಿ ಇರಬೇಕು, ದೇವರ ಸೇವೆ ಮಾಡಬೇಕು ಅಂತ,*+
ನನ್ನ ಕಾಲು ಎಡವಿ ಬೀಳದ ಹಾಗೆ ನೋಡ್ಕೊಂಡೆ.+
ಪಾದಟಿಪ್ಪಣಿ
^ ಅಥವಾ “ನನ್ನನ್ನ ಕಚ್ಚಿ ಸೀಳಿಬಿಡಬೇಕು ಅಂತಿದ್ದಾನೆ.”
^ ಅಕ್ಷ. “ಮಾಂಸ.”
^ ಅಕ್ಷ. “ದೇವರ ಮುಂದೆ ನಡೀಬೇಕು ಅಂತ.”