ಕೀರ್ತನೆ 6:1-10
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಹಾಡನ್ನ ಶೆಮಿನಿತ್* ಸ್ವರಕ್ಕೆ ತಂತಿವಾದ್ಯಗಳನ್ನ ಹೊಂದಿಸ್ಕೊಂಡು ಹಾಡಬೇಕು.
6 ಯೆಹೋವನೇ, ಕೋಪದಿಂದ ನನ್ನ ಬೈಬೇಡ,ಸಿಟ್ಟಿಂದ ನನ್ನನ್ನ ತಿದ್ದಬೇಡ.+
2 ಯೆಹೋವನೇ, ನನಗೆ ದಯೆ* ತೋರಿಸು. ನನ್ನಲ್ಲಿ ಅಷ್ಟು ಶಕ್ತಿ ಇಲ್ಲ.
ಯೆಹೋವನೇ, ನನ್ನನ್ನ ವಾಸಿಮಾಡು.+ ನನ್ನ ಮೂಳೆ ನಡುಗ್ತಿದೆ.
3 ನಿಜವಾಗ್ಲೂ ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ.+
ಯೆಹೋವನೇ, ನಾನು ಇನ್ನೂ ಎಲ್ಲಿ ತನಕ ಹೀಗೇ ಕಷ್ಟಪಡಬೇಕು?+
4 ಯೆಹೋವನೇ, ಬಂದು ನನ್ನ ಕಾಪಾಡು,+ಶಾಶ್ವತ ಪ್ರೀತಿ ತೋರಿಸಿ ನನ್ನನ್ನ ರಕ್ಷಿಸು.+
5 ಯಾಕಂದ್ರೆ ಸತ್ತವರು ನಿನ್ನ ಬಗ್ಗೆ ಮಾತಾಡಲ್ಲ.*
ಸಮಾಧಿಯಲ್ಲಿ* ನಿನ್ನನ್ನ ಹೊಗಳೋರು ಯಾರು?+
6 ಗೋಳಾಡಿ ಗೋಳಾಡಿ ಸುಸ್ತಾಗಿ ಹೋಗಿದ್ದೀನಿ,+ರಾತ್ರಿಯಿಡೀ ಅತ್ತುಅತ್ತು ಕಣ್ಣೀರಿಂದ ನನ್ನ ಹಾಸಿಗೆ ಒದ್ದೆ ಆಗಿದೆ,*ಕಣ್ಣೀರಲ್ಲೇ ನನ್ನ ಮಂಚ ಮುಳುಗಿ ಹೋಗಿದೆ.+
7 ದುಃಖದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ಕಿರುಕುಳ ಕೊಡೋರಿಂದ ನನ್ನ ದೃಷ್ಟಿ ಮಂಜಾಗಿದೆ.
8 ದುಷ್ಟರೇ, ನನ್ನಿಂದ ದೂರ ತೊಲಗಿ.
ಯಾಕಂದ್ರೆ ಯೆಹೋವ ನನ್ನ ವೇದನೆಯನ್ನ ಕೇಳಿಸ್ಕೊಳ್ತಾನೆ.+
9 ದಯೆಗಾಗಿ ನಾನು ಬೇಡೋದನ್ನ ಯೆಹೋವ ಕೇಳಿಸ್ಕೊಳ್ತಾನೆ.+
ನನ್ನ ಪ್ರಾರ್ಥನೆಗೆ ಯೆಹೋವ ಉತ್ತರ ಕೊಡ್ತಾನೆ.
10 ನನ್ನ ಶತ್ರುಗಳೆಲ್ಲ ಅವಮಾನದಿಂದ ಭಯಪಡ್ತಾರೆ.
ತಟ್ಟಂತ ಮಾನಮರ್ಯಾದೆ ಕಳ್ಕೊಂಡು ಓಡಿಹೋಗ್ತಾರೆ.+