ಕೀರ್ತನೆ 77:1-20

  • ಕಷ್ಟಕಾಲದಲ್ಲಿ ಮಾಡಿದ ಪ್ರಾರ್ಥನೆ

    • ದೇವರ ಕೆಲಸಗಳ ಬಗ್ಗೆ ಧ್ಯಾನಿಸೋದು (11, 12)

    • ‘ದೇವರೇ, ನಿನ್ನಂಥ ಮಹಾ ದೇವರು ಬೇರೆ ಇದ್ದಾರಾ?’ (13)

ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌* ರಾಗದಲ್ಲಿ ಹಾಡಬೇಕು. ಆಸಾಫನ+ ಮಧುರ ಗೀತೆ. 77  ನಾನು ಜೋರಾಗಿ ದೇವರಿಗೆ ಮೊರೆ ಇಡ್ತೀನಿ,ನಾನು ದೇವರಿಗೆ ಪ್ರಾರ್ಥಿಸ್ತೀನಿ, ಆತನು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊತಾನೆ.+   ಕಷ್ಟಕಾಲದಲ್ಲಿ ನಾನು ಯೆಹೋವನಿಗಾಗಿ ಹುಡುಕ್ತೀನಿ.+ ಇಡೀ ರಾತ್ರಿ ನಾನು ನನ್ನ ಕೈಗಳನ್ನ ಆತನ ಕಡೆಗೆ ಚಾಚ್ಕೊಂಡೇ ಇರ್ತಿನಿ. ಆದ್ರೂ ನನಗೆ ನೆಮ್ಮದಿ ಸಿಗ್ತಿಲ್ಲ.   ದೇವರು ಮಾಡಿದ್ದನ್ನೆಲ್ಲ ನೆನಪಿಸ್ಕೊಂಡು ಆತನಿಗಾಗಿ ಹಾತೊರಿತಾ ಇದ್ದೀನಿ,+ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ, ನನ್ನ ಶಕ್ತಿ ಇಳಿದುಹೋಗಿದೆ.+ (ಸೆಲಾ)   ನನ್ನ ಕಣ್ಣಿನ ರೆಪ್ಪೆ ಮುಚ್ಚಿಹೋಗದೆ ಇರೋ ತರ ನೀನು ಹಿಡ್ಕೊತೀಯ,ನಾನು ಚಿಂತೆಯಲ್ಲೇ ಮುಳುಗಿದ್ದೀನಿ, ನನ್ನಿಂದ ಮಾತಾಡೋಕೆ ಆಗ್ತಿಲ್ಲ.   ಮುಗಿದು ಹೋದ ದಿನಗಳ ಬಗ್ಗೆ ನಾನು ಆಲೋಚಿಸ್ತೀನಿ,+ಉರುಳಿ ಹೋದ ವರ್ಷಗಳ ಬಗ್ಗೆ ನಾನು ನೆನಪಿಸ್ಕೊಳ್ತೀನಿ.   ರಾತ್ರಿ ಹೊತ್ತು ನಾನು ನನ್ನ ಹಾಡನ್ನ* ನೆನಪಿಸ್ಕೊತೀನಿ,+ನನ್ನ ಮನಸ್ಸಲ್ಲಿ ಧ್ಯಾನಿಸ್ತೀನಿ,+ಈ ಪ್ರಶ್ನೆಗಳಿಗೆ ಶ್ರದ್ಧೆಯಿಂದ ಉತ್ರ ಹುಡುಕ್ತೀನಿ.   ಯೆಹೋವ ನಮ್ಮನ್ನ ಶಾಶ್ವತಕ್ಕೂ ಬಿಟ್ಟುಬಿಡ್ತಾನಾ?+ ಆತನು ತನ್ನ ಕೃಪೆನ ಇನ್ಯಾವತ್ತೂ ತೋರಿಸಲ್ವಾ?+   ಆತನು ತನ್ನ ಪ್ರೀತಿಯನ್ನ ಶಾಶ್ವತವಾಗಿ ತೋರಿಸದೆ ಇರ್ತಾನಾ? ಆತನು ಕೊಟ್ಟ ಮಾತು ನಿಜ ಆಗೋದನ್ನ ಯಾವ ಪೀಳಿಗೆನೂ ನೋಡಲ್ವಾ?   ದೇವರು ತನ್ನ ಕೃಪೆ ತೋರಿಸೋದನ್ನ ಮರೆತುಬಿಟ್ಟಿದ್ದಾನಾ?+ ಅಥವಾ ಆತನು ತನ್ನ ಕೋಪದಿಂದ ಕರುಣೆ ತೋರಿಸೋದನ್ನ ನಿಲ್ಲಿಸಿಬಿಟ್ಟಿದ್ದಾನಾ? (ಸೆಲಾ) 10  “ಸರ್ವೋನ್ನತನು ನಮಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾನೆಅನ್ನೋ ಚಿಂತೆ ನನ್ನನ್ನ ಕಿತ್ತುತಿಂತಿದೆ”+ ಅಂತ ನಾನು ಹೇಳ್ತಾ ಇರಬೇಕಾ? 11  ಯಾಹುವಿನ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ,ನೀನು ತುಂಬ ಹಿಂದೆ ಮಾಡಿದ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ. 12  ನಿನ್ನ ಎಲ್ಲ ಚಟುವಟಿಕೆಗಳನ್ನ ನಾನು ಧ್ಯಾನಿಸ್ತೀನಿ,ನಿನ್ನ ಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.+ 13  ದೇವರೇ, ನಿನ್ನ ದಾರಿಗಳು ಪವಿತ್ರ. ದೇವರೇ, ನಿನ್ನಂಥ ಮಹಾ ದೇವರು ಬೇರೆ ಯಾರಾದ್ರೂ ಇದ್ದಾರಾ?+ 14  ನೀನೇ ಸತ್ಯ ದೇವರು, ನಿನ್ನ ಕೆಲಸಗಳೆಲ್ಲ ಅದ್ಭುತ.+ ನೀನು ನಿನ್ನ ಬಲವನ್ನ ಜನಾಂಗಗಳಿಗೆ ತೋರಿಸಿದೆ.+ 15  ನಿನ್ನ ಶಕ್ತಿಯಿಂದ* ನಿನ್ನ ಜನ್ರಾದಯಾಕೋಬನ ಮತ್ತು ಯೋಸೇಫನ ಮಕ್ಕಳನ್ನ ಕಾಪಾಡಿದೆ.*+ (ಸೆಲಾ) 16  ದೇವರೇ, ಸಮುದ್ರ ನಿನ್ನನ್ನ ನೋಡ್ತು,ಅದು ನಿನ್ನನ್ನ ನೋಡಿ ಭಯಪಡ್ತು.+ ಆಳವಾದ ನೀರು ಅಲ್ಲೋಲಕಲ್ಲೋಲ ಆಯ್ತು. 17  ಮೋಡಗಳು ನೀರು ಸುರಿಸಿದ್ವು. ಮೇಘಗಳಿಂದ ತುಂಬಿದ ಆಕಾಶ ಗುಡುಗಿತು,ನಿನ್ನ ಮಿಂಚಿನ ಬಾಣಗಳು ಎಲ್ಲ ಕಡೆ ಹೊಳೆದ್ವು.+ 18  ನಿನ್ನ ಗುಡುಗಿನ+ ಶಬ್ದ ಯುದ್ಧರಥದ ಶಬ್ದದ ತರ ಇತ್ತು,ನಿನ್ನ ಮಿಂಚಿನ ಹೊಳಪಿಂದ ಇಡೀ ಭೂಮಿ* ಪ್ರಕಾಶಿಸ್ತು.+ ಭೂಮಿ ನಡುಗಿ, ಕಂಪಿಸ್ತು.+ 19  ನಿನ್ನ ದಾರಿ ಸಮುದ್ರದ ಒಳಗಿಂದ ಹೋಯ್ತು,+ನಿನ್ನ ಮಾರ್ಗ ಎಷ್ಟೋ ಜಲರಾಶಿಗಳ ಮಧ್ಯದಿಂದ ಹೋಯ್ತು,ಆದ್ರೆ ನಿನ್ನ ಹೆಜ್ಜೆ ಗುರುತನ್ನ ಕಂಡುಹಿಡಿಯೋಕೆ ಆಗಲಿಲ್ಲ. 20  ಮೋಶೆ ಮತ್ತು ಆರೋನರ ಸಂರಕ್ಷಣೆಯ ಕೆಳಗೆ,*+ನೀನು ನಿನ್ನ ಜನ್ರನ್ನ ಕುರಿ ಹಿಂಡಿನ ತರ ನಡೆಸಿದೆ.+

ಪಾದಟಿಪ್ಪಣಿ

ಅಥವಾ “ತಂತಿವಾದ್ಯದ ಸಂಗೀತವನ್ನ.”
ಅಕ್ಷ. “ತೋಳಿಂದ.”
ಅಕ್ಷ. “ಬಿಡಿಸಿದೆ.”
ಅಥವಾ “ಫಲವತ್ತಾದ ನೆಲ.”
ಅಕ್ಷ. “ಕೈಯಿಂದ.”