ಕೀರ್ತನೆ 94:1-23
94 ಸೇಡು ತೀರಿಸೋ ದೇವರಾದ ಯೆಹೋವನೇ,+ಪ್ರತಿಕಾರ ತೀರಿಸೋ ದೇವರೇ, ನಿನ್ನ ಬೆಳಕನ್ನ ಪ್ರಕಾಶಿಸು!
2 ಭೂಮಿಯ ನ್ಯಾಯಾಧೀಶನೇ, ಎದ್ದೇಳು.+
ದುರಹಂಕಾರಿಗಳಿಗೆ ತಕ್ಕ ಶಿಕ್ಷೆ ಕೊಡು.+
3 ಯೆಹೋವನೇ, ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?
ಹೇಳು! ಎಲ್ಲಿ ತನಕ?+
4 ಅವರು ಹುಚ್ಚುಹುಚ್ಚಾಗಿ ಮಾತಾಡ್ತಾರೆ, ಜಂಬದಿಂದ ಮಾತಾಡ್ತಾರೆ,ತಪ್ಪು ಮಾಡೋರೆಲ್ಲ ತಮ್ಮ ಬಗ್ಗೆ ತಾವೇ ಬಡಾಯಿ ಕೊಚ್ಕೊಳ್ತಾರೆ.
5 ಯೆಹೋವನೇ, ಅವರು ನಿನ್ನ ಜನ್ರನ್ನ ಜಜ್ಜುತ್ತಾರೆ,+ನಿನ್ನ ಜನ್ರ* ಮೇಲೆ ದೌರ್ಜನ್ಯ ಮಾಡ್ತಾರೆ.
6 ಅವರು ವಿಧವೆಯನ್ನ, ವಿದೇಶಿಯನ್ನ ಕೊಂದುಹಾಕ್ತಾರೆ,ಅನಾಥರನ್ನ ಕೊಲ್ತಾರೆ.
7 “ಯಾಹು ಇದನ್ನೆಲ್ಲ ನೋಡಲ್ಲ,+ಯಾಕೋಬನ ದೇವರು ಇವನ್ನ ಗಮನಿಸಲ್ಲ”+ ಅಂತ ಅವರು ಹೇಳ್ತಾರೆ.
8 ಅವಿವೇಕಿಗಳೇ, ಇದನ್ನ ಅರ್ಥಮಾಡ್ಕೊಳ್ಳಿ,ಮೂರ್ಖರೇ, ನಿಮಗೆ ಯಾವಾಗ ಬುದ್ಧಿ* ಬರೋದು?+
9 ಕಿವಿಯನ್ನ ಮಾಡಿದ* ದೇವರು ಕೇಳಿಸಿಕೊಳ್ಳಲ್ವಾ?
ಕಣ್ಣನ್ನ ಕೊಟ್ಟ ದೇವರು ನೋಡಲ್ವಾ?+
10 ದೇಶಗಳನ್ನೇ ತಿದ್ದೋನಿಗೆ ನಿಮ್ಮನ್ನ ತಿದ್ದಕ್ಕೆ ಆಗಲ್ವಾ?+
ಜನ್ರಿಗೆ ಜ್ಞಾನ ಕೋಡೋನು ಆತನೇ!+
11 ಮನುಷ್ಯರ ಆಲೋಚನೆಗಳ ಬಗ್ಗೆ ಯೆಹೋವನಿಗೆ ಗೊತ್ತು,ಅವರು ಬರೀ ಉಸಿರು ಅಂತ ಆತನಿಗೆ ಗೊತ್ತು.+
12 ಯಾಹುವೇ, ಯಾವ ಮನುಷ್ಯನನ್ನ ನೀನು ತಿದ್ದುತ್ತೀಯೋ,+ಯಾವ ವ್ಯಕ್ತಿಗೆ ನಿನ್ನ ನಿಯಮ ಪುಸ್ತಕದಿಂದ ಕಲಿಸ್ತಿಯೋ ಅವನು ಭಾಗ್ಯವಂತ,+
13 ಕಷ್ಟದ ದಿನಗಳಲ್ಲಿ ನೀನು ಅವನಿಗೆ ನೆಮ್ಮದಿ ಕೊಡು.
ಕೆಟ್ಟವನಿಗಾಗಿ ಒಂದು ಗುಂಡಿ ಅಗೆಯೋ ತನಕ ಅವನು ನಿರಾಳವಾಗಿ ಇರಲಿ.+
14 ಯೆಹೋವ ತನ್ನ ಜನ್ರನ್ನ ತೊರೆಯಲ್ಲ,+ತನ್ನ ಆಸ್ತಿಯನ್ನ ಬಿಟ್ಟುಬಿಡಲ್ಲ.+
15 ಯಾಕಂದ್ರೆ ಇನ್ನೊಂದು ಸಲ ನೀತಿಯಿಂದ ತೀರ್ಪು ಆಗುತ್ತೆ,ಹೃದಯದಲ್ಲಿ ಪ್ರಾಮಾಣಿಕರಾಗಿ ಇರೋರೆಲ್ಲ ಅದನ್ನ ಪಾಲಿಸ್ತಾರೆ.
16 ನನಗಾಗಿ ಕೆಟ್ಟವರ ವಿರುದ್ಧ ಯಾರು ಎದ್ದೇಳ್ತಾರೆ?
ನನಗಾಗಿ ತಪ್ಪು ಮಾಡೋರ ವಿರುದ್ಧ ಯಾರು ಎದ್ದು ನಿಲ್ತಾರೆ?
17 ಯೆಹೋವ ನನ್ನ ಸಹಾಯಕನಾಗಿ ಇರದಿದ್ರೆ,ನಾನು ಬೇಗ ನಾಶವಾಗಿ ಹೋಗ್ತಿದ್ದೆ.*+
18 “ನನ್ನ ಕಾಲು ಜಾರಿತು” ಅಂತ ನಾನು ಹೇಳಿದಾಗ,ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ನನಗೆ ಆಸರೆ ಕೊಡ್ತು.+
19 ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ,*ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.+
20 ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋ ಭ್ರಷ್ಟ ಅಧಿಕಾರಿಗಳುನಿನ್ನ ಜೊತೆ ನಂಟು ಬೆಳೆಸ್ಕೊಳ್ಳೋಕೆ ಆಗುತ್ತಾ?+
21 ಅವರು ನೀತಿವಂತನ ಮೇಲೆ ಉಗ್ರ ಆಕ್ರಮಣ ಮಾಡ್ತಾರೆ+ನಿರಪರಾಧಿಗೆ ಮರಣಶಿಕ್ಷೆ ಕೊಡ್ತಾರೆ.+
22 ಆದ್ರೆ ಯೆಹೋವ ನನಗೆ ಒಂದು ಸುರಕ್ಷಿತ ಆಶ್ರಯ ಆಗ್ತಾನೆ,*ನನ್ನ ದೇವರು ನನಗೆ ಆಶ್ರಯ ಕೊಡೋ ಬಂಡೆ.+
23 ಅವ್ರ ದುಷ್ಟ ಕೆಲಸಗಳು ಅವ್ರ ಮೇಲೆನೇ ಬರೋ ತರ ಆತನು ಮಾಡ್ತಾನೆ.+
ಅವ್ರ ಕೆಟ್ಟತನದಿಂದ ಅವ್ರೇ ನಾಶವಾಗೋ ಹಾಗೆ ಮಾಡ್ತಾನೆ.
ನಮ್ಮ ದೇವರಾದ ಯೆಹೋವ ಅವ್ರನ್ನ ನಿರ್ನಾಮ ಮಾಡ್ತಾನೆ.+
ಪಾದಟಿಪ್ಪಣಿ
^ ಅಕ್ಷ. “ಆಸ್ತಿಯ.”
^ ಅಕ್ಷ. “ಒಳನೋಟ.”
^ ಅಕ್ಷ. “ನೆಟ್ಟ.”
^ ಅಕ್ಷ. “ನಿಶಬ್ಧದಲ್ಲಿ ನಾನು ವಾಸಿಸ್ತಿದ್ದೆ.”
^ ಅಥವಾ “ಕಳವಳ ಜಾಸ್ತಿ ಆದಾಗ.”
^ ಅಥವಾ “ಉನ್ನತ ಸ್ಥಳ ಆಗ್ತಾನೆ.”