ಜ್ಞಾನೋಕ್ತಿ 15:1-33
15 ಮೃದುವಾದ* ಉತ್ತರ ಕೋಪ ಕಡಿಮೆ ಮಾಡುತ್ತೆ,+ಒರಟಾದ* ಮಾತು ಕೋಪ ಬರಿಸುತ್ತೆ.+
2 ವಿವೇಕಿಯ ನಾಲಿಗೆ ಜ್ಞಾನವನ್ನ ಒಳ್ಳೇ ರೀತಿಯಲ್ಲಿ ಉಪಯೋಗಿಸುತ್ತೆ,+ದಡ್ಡನ ಬಾಯಿ ಮೂರ್ಖತನವನ್ನ ತಟ್ಟಂತ ಒದರಿಬಿಡುತ್ತೆ.
3 ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ,ಆತನು ಒಳ್ಳೆಯವ್ರನ್ನ, ಕೆಟ್ಟವ್ರನ್ನ ನೋಡ್ತಾ ಇರ್ತಾನೆ.+
4 ಶಾಂತವಾಗಿರೋ ನಾಲಿಗೆ* ಸಾಂತ್ವನ ಕೊಡುತ್ತೆ,*+ತಿರುಚಿದ ಮಾತು ಮನಸ್ಸನ್ನ ಜಜ್ಜಿಹಾಕುತ್ತೆ.
5 ಮೂರ್ಖ ತನ್ನ ಅಪ್ಪ ಕೊಡೋ ಶಿಸ್ತನ್ನ ಕೀಳಾಗಿ ನೋಡ್ತಾನೆ,+ಆದ್ರೆ ಬೇರೆಯವರು ತಿದ್ದುವಾಗ ಜಾಣ ಸ್ವೀಕರಿಸ್ತಾನೆ.+
6 ನೀತಿವಂತನ ಮನೇಲಿ ತುಂಬ ಆಸ್ತಿಪಾಸ್ತಿ ಇರುತ್ತೆ,ಕೆಟ್ಟವನ ಆದಾಯ* ಅವನಿಗೆ ತೊಂದ್ರೆ ತಂದಿಡುತ್ತೆ.+
7 ವಿವೇಕಿಯ ತುಟಿಗಳು ಜ್ಞಾನವನ್ನ ಹಬ್ಬಿಸುತ್ತೆ,+ಆದ್ರೆ ದಡ್ಡನ ಹೃದಯ ಹಾಗೆ ಮಾಡಲ್ಲ.+
8 ಕೆಟ್ಟವನ ಬಲಿಯನ್ನ ಯೆಹೋವ ಸ್ವೀಕರಿಸಲ್ಲ,+ನೀತಿವಂತನ ಪ್ರಾರ್ಥನೆಯನ್ನ ಖುಷಿಯಿಂದ ಕೇಳ್ತಾನೆ.+
9 ಕೆಟ್ಟವನ ದಾರಿ ಯೆಹೋವನಿಗೆ ಅಸಹ್ಯ,+ನೀತಿಯಿಂದ ನಡ್ಕೊಳ್ಳೋ ವ್ಯಕ್ತಿ ಕಂಡ್ರೆ ಆತನಿಗೆ ಪ್ರೀತಿ.+
10 ಒಳ್ಳೇ ದಾರಿಯನ್ನ ಬಿಟ್ಟುಬಿಡುವವನಿಗೆ ಶಿಸ್ತು ಇಷ್ಟ ಆಗಲ್ಲ,+ತಿದ್ದುವಾಗ ದ್ವೇಷಿಸುವವನು ತನ್ನ ಜೀವ ಕಳ್ಕೊಳ್ತಾನೆ.+
11 ಯೆಹೋವನಿಗೆ ಸಮಾಧಿಯಲ್ಲಿ* ಇರುವವ್ರನ್ನ, ನಾಶದ ಜಾಗದಲ್ಲಿ* ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+
12 ಗೇಲಿ ಮಾಡುವವನು ತನ್ನನ್ನ ತಿದ್ದುವವನನ್ನ ಇಷ್ಟಪಡಲ್ಲ.+
ಅವನು ವಿವೇಕಿಯ ಸಲಹೆಯನ್ನ ಕೇಳಲ್ಲ.+
13 ಹರ್ಷಹೃದಯದಿಂದ ಹಸನ್ಮುಖ,ಮನೋವ್ಯಥೆಯಿಂದ ನಿರುತ್ಸಾಹ.+
14 ಅರ್ಥ ಮಾಡ್ಕೊಳ್ಳೋ ಹೃದಯ ಜ್ಞಾನವನ್ನ ಹುಡುಕುತ್ತೆ,+ಮೂರ್ಖ ತನ್ನ ಬಾಯಲ್ಲಿ ಮೂರ್ಖತನವನ್ನ ತುಂಬಿಸ್ತಾನೆ.+
15 ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ,+ಸಂತೋಷದ* ಹೃದಯ ಇರುವವನಿಗೆ ದಿನಾಲೂ ಔತಣ.+
16 ತುಂಬ ಆಸ್ತಿ ಇದ್ದು ಚಿಂತೆಯಲ್ಲಿ ಮುಳುಗೋದಕ್ಕಿಂತ,+ಸ್ವಲ್ಪನೇ ಇದ್ದು ಯೆಹೋವನಿಗೆ ಭಯಪಡೋದು ಒಳ್ಳೇದು.+
17 ದ್ವೇಷ ಇರೋ ಮನೇಲಿ ಮಾಂಸದೂಟ* ಮಾಡೋದಕ್ಕಿಂತ,+ಪ್ರೀತಿ ಇರೋ ಮನೇಲಿ ತರಕಾರಿ* ಊಟ ಮಾಡೋದೇ ಒಳ್ಳೇದು.+
18 ಕೋಪಿಷ್ಠ ಜಗಳ ಜಾಸ್ತಿ ಮಾಡ್ತಾನೆ,+ತಟ್ಟಂಥ ಕೋಪ ಮಾಡ್ಕೊಳ್ಳದವನು ಜಗಳನ ಶಾಂತ ಮಾಡ್ತಾನೆ.+
19 ಮೈಗಳ್ಳನ ದಾರಿ ಮುಳ್ಳಿನ ಬೇಲಿ,+ನೀತಿವಂತನ ದಾರಿ ಸಮತಟ್ಟಾದ ಹೆದ್ದಾರಿ.+
20 ವಿವೇಕಿಯಾದ ಮಗ ತನ್ನ ಅಪ್ಪನನ್ನ ಸಂತೋಷ ಪಡಿಸ್ತಾನೆ,+ಮೂರ್ಖ ತನ್ನ ಅಮ್ಮನನ್ನ ಕೀಳಾಗಿ ನೋಡ್ತಾನೆ.+
21 ಬುದ್ಧಿ ಇಲ್ಲದವನಿಗೆ* ಮೂರ್ಖತನದಿಂದ ಸಂತೋಷ ಸಿಗುತ್ತೆ,+ವಿವೇಚನೆ ಇರುವವನು ಸರಿ ದಾರಿಯಲ್ಲಿ ಹೋಗ್ತಾನೆ.+
22 ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ,ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ.+
23 ಸರಿ ಉತ್ತರ ಕೊಡುವವನು ಸಂತೋಷವಾಗಿ ಇರ್ತಾನೆ,+ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.+
24 ಜೀವದ ದಾರಿ ತಿಳುವಳಿಕೆ* ಇರುವವನನ್ನ ಮೇಲೆ ಏರಿಸುತ್ತೆ,+ಕೆಳಗಿರೋ ಸಮಾಧಿ ಕಡೆ ಹೋಗದ ಹಾಗೆ ತಡಿಯುತ್ತೆ.+
25 ಯೆಹೋವ ಅಹಂಕಾರಿಯ ಮನೆಯನ್ನ ಮುರಿದುಬಿಡ್ತಾನೆ,+ವಿಧವೆಯ ಜಮೀನಿನ ಗಡಿಗಳನ್ನ ಕಾದು ಕಾಪಾಡ್ತಾನೆ.+
26 ಕೆಟ್ಟವನ ಸಂಚು ಯೆಹೋವನಿಗೆ ಇಷ್ಟ ಇಲ್ಲ,+ಹಿತವಾದ ನುಡಿಗಳು ಆತನಿಗೆ ಇಷ್ಟ.+
27 ಮೋಸದಿಂದ ಹಣ ಮಾಡುವವನು ತನ್ನ ಮನೆಯವ್ರ ಮೇಲೆ ಕಷ್ಟ ತಂದಿಡ್ತಾನೆ,+ಆದ್ರೆ ಲಂಚವನ್ನ ದ್ವೇಷಿಸುವವನು ಬಾಳಿ ಬದುಕ್ತಾನೆ.+
28 ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ,*+ಆದ್ರೆ ಕೆಟ್ಟವನ ಬಾಯಿ ಕೆಟ್ಟ ವಿಷ್ಯಗಳನ್ನ ಕಕ್ಕುತ್ತೆ.
29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+
30 ಹೊಳೆಯೋ ಕಣ್ಣನ್ನ ನೋಡಿದ್ರೆ* ಹೃದಯಕ್ಕೆ ಖುಷಿ,ಒಳ್ಳೇ ಸುದ್ದಿಯಿಂದ ಮೂಳೆಗೆ ಚೈತನ್ಯ.+
31 ಜೀವ ಕೊಡೋ ಬುದ್ಧಿಮಾತನ್ನ* ಕೇಳುವವನುವಿವೇಕಿಗಳ ಜೊತೆ ಇರ್ತಾನೆ.+
32 ಶಿಸ್ತನ್ನ ತಿರಸ್ಕರಿಸುವವನು ತನ್ನ ಜೀವವನ್ನ ಕೀಳಾಗಿ ನೋಡ್ತಾನೆ,+ತಿದ್ದುವಾಗ ಸ್ವೀಕರಿಸುವವನು ಅರ್ಥ ಮಾಡ್ಕೊಳ್ಳೋ ಶಕ್ತಿ* ಪಡಿತಾನೆ.+
33 ಯೆಹೋವನ ಭಯವೇ ವಿವೇಕವನ್ನ ಕಲಿಸೋ ತರಬೇತಿ,+ದೀನತೆಯಿಂದ ಇದ್ರೆ ಗೌರವ ಸಿಗುತ್ತೆ.+
ಪಾದಟಿಪ್ಪಣಿ
^ ಅಥವಾ “ನೋವು ಮಾಡೋ.”
^ ಅಥವಾ “ಹಿತವಾದ.”
^ ಅಥವಾ “ವಾಸಿಮಾಡೋ ನಾಲಿಗೆ.”
^ ಅಕ್ಷ. “ಜೀವದ ಮರ.”
^ ಅಕ್ಷ. “ಫಲ.”
^ ಅಥವಾ “ಒಳ್ಳೇ.”
^ ಅಕ್ಷ. “ಸರಳ.”
^ ಅಕ್ಷ. “ದಷ್ಟಪುಷ್ಟವಾದ ಹೋರಿ.”
^ ಅಕ್ಷ. “ಹೃದಯ ಇಲ್ಲದವನಿಗೆ.”
^ ಅಕ್ಷ. “ಒಳನೋಟ.”
^ ಅಥವಾ “ಹೇಗೆ ಉತ್ತರ ಕೊಡಬೇಕಂತ ಜಾಗ್ರತೆಯಿಂದ ಪರಿಗಣಿಸುತ್ತೆ, ಮಾತಾಡೋ ಮುಂಚೆ ಯೋಚಿಸುತ್ತೆ.”
^ ಅಥವಾ “ಸಂತೋಷದ ನೋಟದಿಂದ.”
^ ಅಥವಾ “ತಿದ್ದುಪಾಟನ್ನ.”
^ ಅಕ್ಷ. “ಹೃದಯ.”