ಯೆರೆಮೀಯ 47:1-7

  • ಫಿಲಿಷ್ಟಿಯರ ವಿರುದ್ಧ ಭವಿಷ್ಯವಾಣಿ (1-7)

47  ಫರೋಹ ಗಾಜಾ ಪಟ್ಟಣ ಸೋಲಿಸೋ ಮುಂಚೆ ಫಿಲಿಷ್ಟಿಯರ+ ಬಗ್ಗೆ ಪ್ರವಾದಿ ಯೆರೆಮೀಯನಿಗೆ ಯೆಹೋವ ಹೇಳಿದ ಮಾತುಗಳು.  ಯೆಹೋವ ಹೇಳೋದು ಏನಂದ್ರೆ,“ನೋಡು, ಉತ್ತರದಿಂದ ನೀರು ಹರಿದು ಬರ್ತಿದೆ. ಉಕ್ಕಿ ಹರಿದು ಪ್ರವಾಹ ಬರುತ್ತೆ. ಇಡೀ ದೇಶ ತುಂಬ್ಕೊಂಡು ಅಲ್ಲಿ ಇರೋದನ್ನೆಲ್ಲ ಮುಳುಗಿಸಿ ಬಿಡುತ್ತೆ,ಪಟ್ಟಣವನ್ನ ಜನ್ರನ್ನ ಮುಳುಗಿಸಿಬಿಡುತ್ತೆ. ಆ ದೇಶದಲ್ಲಿರೋ ಗಂಡಸರು ಜೋರಾಗಿ ಅಳ್ತಾರೆ,ಅಲ್ಲಿ ವಾಸ ಮಾಡೋ ಪ್ರತಿಯೊಬ್ರೂ ಗೋಳಾಡ್ತಾರೆ.   ಶತ್ರುವಿನ ಕುದುರೆಗಳು ದೌಡಾಯಿಸಿ ಬರ್ತಿರೋ ಸದ್ದನ್ನ,ವೇಗವಾಗಿ ಬರ್ತಿರೋ ಅವನ ಯುದ್ಧರಥಗಳ ಲಟಲಟ ಸದ್ದನ್ನ,ರಥಗಳ ಚಕ್ರಗಳ ಗಡಗಡ ಶಬ್ದ ಕೇಳಿಅಪ್ಪಂದಿರಿಗೆ ಎಷ್ಟು ಭಯ ಆಗುತ್ತೆ ಅಂದ್ರೆಮಕ್ಕಳನ್ನ ಕಾಪಾಡೋಕೆ ಹಿಂದೆ ತಿರುಗಿನೂ ನೋಡ್ದೆ ಓಡ್ತಾರೆ.   ಯಾಕಂದ್ರೆ ಆ ದಿನದಲ್ಲಿ ಎಲ್ಲ ಫಿಲಿಷ್ಟಿಯರು ನಾಶ ಆಗ್ತಾರೆ,+ಅದು ತೂರ್‌,+ ಸೀದೋನಿನ+ ಉಳಿದ ಎಲ್ಲ ಮಿತ್ರರಾಷ್ಟ್ರಗಳನ್ನ ನಾಶ ಮಾಡಿಬಿಡುತ್ತೆ. ಕಫ್ತೋರ್‌*+ ದ್ವೀಪದಿಂದ ಬಂದ ಫಿಲಿಷ್ಟಿಯರಲ್ಲಿ ಉಳಿದವ್ರನ್ನ ಯೆಹೋವ ನಾಶ ಮಾಡ್ತಾನೆ.   ಗಾಜಾ ಬೋಳಾಗುತ್ತೆ.* ಅಷ್ಕೆಲೋನಿನ ಬಾಯಿ ಮುಚ್ಚುತ್ತೆ.+ ಅವ್ರ ಕಣಿವೆ ಬಯಲಲ್ಲಿ ಉಳಿದವರೇ,ಇನ್ನೆಷ್ಟು ದಿನ ನೀವು ದೇಹಕ್ಕೆ ಗಾಯಮಾಡ್ಕೊಳ್ತಾ ಇರ್ತಿರಾ?+   ಅಯ್ಯೋ, ಯೆಹೋವನ ಕತ್ತಿಯೇ,+ನೀನು ಸುಮ್ಮನಾಗೋದು ಯಾವಾಗ? ನೀನು ನಿನ್ನ ಚೀಲದಲ್ಲಿ ಸೇರ್ಕೊ. ಸುಮ್ಮನೆ ಅಲ್ಲಿ ವಿಶ್ರಾಂತಿ ಪಡ್ಕೊ.   ಆ ಕತ್ತಿಗೆ ಯೆಹೋವನೇ ಆಜ್ಞೆ ಕೊಟ್ಟಿರುವಾಗಅದು ಹೇಗೆ ತಾನೆ ಸುಮ್ಮನಿರುತ್ತೆ? ಆತನು ಅದಕ್ಕೆ ಅಷ್ಕೆಲೋನ್‌, ಸಮುದ್ರ ತೀರಪ್ರದೇಶದ ವಿರುದ್ಧ+ಯುದ್ಧ ಮಾಡೋಕೆ ಹೇಳಿದ್ದಾನೆ.”

ಪಾದಟಿಪ್ಪಣಿ

ಅಂದ್ರೆ, ಕ್ರೇತ.
ಅಂದ್ರೆ, ಅವರು ದುಃಖದಿಂದ ನಾಚಿಕೆಯಿಂದ ತಲೆ ಬೋಳಿಸ್ಕೊಳ್ತಾರೆ.