ಯೆಶಾಯ 53:1-12
53 ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ* ಯಾರು ನಂಬಿಕೆ ಇಟ್ಟಿದ್ದಾರೆ?+
ತನ್ನ ಶಕ್ತಿಯನ್ನ* ಯೆಹೋವ+ ಯಾರಿಗೆ ತೋರಿಸಿದ್ದಾನೆ?+
2 ಅವನು ಚಿಗುರಿನ+ ತರ ಅವನ* ಮುಂದೆ ಬರ್ತಾನೆ,ನೀರಿಲ್ಲದ ದೇಶದಲ್ಲಿರೋ ಬೇರಿನ ತರ ಬರ್ತಾನೆ.
ಅವನಲ್ಲಿ ಘನಗಾಂಭೀರ್ಯ ಇಲ್ಲ,+ನಾವು ಅವನನ್ನ ನೋಡಿದಾಗ ಅವನ ರೂಪಕ್ಕೆ ಆಕರ್ಷಿತರಾಗಲ್ಲ.*
3 ಅವನನ್ನ ತಿರಸ್ಕಾರದಿಂದ ನೋಡಲಾಯ್ತು, ಮನುಷ್ಯರು ಅವನನ್ನ ದೂರ ಮಾಡಿದ್ರು,+ನೋವಂದ್ರೆ ಏನು, ಅನಾರೋಗ್ಯ ಅಂದ್ರೇನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.
ಅವನ ಮುಖವನ್ನ ನೋಡದೇ ಇರೋಕೆ ನಾವು ನಮ್ಮ ದೃಷ್ಟಿಯನ್ನ ತಿರುಗಿಸ್ಕೊಂಡ್ವಿ,*ಅವನನ್ನ ತಿರಸ್ಕಾರದಿಂದ ಕಾಣಲಾಯ್ತು, ನಾವು ಅವನಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ.+
4 ನಮ್ಮ ರೋಗಗಳನ್ನ ಅವನು ತನ್ನ ಮೇಲೆ ಹೊತ್ಕೊಂಡನು,+ನಮ್ಮ ನೋವುಗಳನ್ನ ಅವನು ಅನುಭವಿಸಿದನು.+
ಆದ್ರೆ ನಾವು ಅವನನ್ನ ಮಾರಕ ವ್ಯಾಧಿಗೆ ತುತ್ತಾದವನ ತರ ನೋಡಿದ್ವಿ. ದೇವರಿಂದ ಹೊಡೆತ ತಿಂದು ಕಷ್ಟ ಅನುಭವಿಸುವವನ ತರ ಕಂಡ್ವಿ.
5 ಆದ್ರೆ ನಮ್ಮ ಅಪರಾಧಗಳಿಗಾಗಿ ಅವನನ್ನ ಚುಚ್ಚಲಾಯ್ತು,+ನಮ್ಮ ತಪ್ಪುಗಳಿಗಾಗಿ ಅವನನ್ನ ಜಜ್ಜಲಾಯ್ತು.+
ನಮ್ಮ ಶಾಂತಿಗಾಗಿ ಅವನು ಶಿಕ್ಷೆ ಅನುಭವಿಸಿದನು,+ಅವನ ಗಾಯಗಳಿಂದ ನಮಗೆ ವಾಸಿ ಆಯ್ತು.+
6 ಕುರಿಗಳ ತರ ನಾವೆಲ್ಲ ಅತ್ತಿತ್ತ ಅಲೆದಾಡಿದ್ವಿ,+ನಾವೆಲ್ಲ ನಮ್ಮನಮ್ಮ ದಾರಿ ಹಿಡಿದು ಹೋದ್ವಿ,ನಮ್ಮೆಲ್ಲರ ತಪ್ಪುಗಳನ್ನ ಯೆಹೋವ ಅವನ ತಲೆ ಮೇಲೆ ಹಾಕಿದನು.+
7 ಅವನ ಮೇಲೆ ದಬ್ಬಾಳಿಕೆ ಮಾಡಲಾಯ್ತು,+ ಅವನು ಎಲ್ಲವನ್ನೂ ಸುಮ್ಮನೆ ಸಹಿಸಿದನು,+ಒಂದು ಮಾತೂ ಆಡಲಿಲ್ಲ.
ಬಲಿಯ ಕುರಿಮರಿನ ಕರ್ಕೊಂಡು ಬರೋ ತರ ಅವನನ್ನ ಕರ್ಕೊಂಡು ಬರಲಾಯ್ತು,+ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿ ನಿಲ್ಲೋ ಕುರಿ ತರಅವನು ತನ್ನ ಬಾಯಿ ತೆರಿದೇ ಸುಮ್ಮನಿದ್ದನು.+
8 ದಬ್ಬಾಳಿಕೆಯಿಂದ, ಅನ್ಯಾಯದಿಂದ ಅವನ ಜೀವ ತೆಗಿಲಾಯ್ತು,*ಆದ್ರೆ ಅವನು ಯಾರು? ಎಲ್ಲಿಂದ ಬಂದ? ಅಂತ ತಿಳಿಯೋಕೆ ಯಾರೂ ಪ್ರಯತ್ನಿಸಲಿಲ್ಲ.
ಅವನನ್ನ ಭೂಮಿ ಮೇಲಿಂದ* ಅಳಿಸಿಹಾಕಲಾಯ್ತು,+ನನ್ನ ಜನ್ರ ಅಪರಾಧಗಳಿಗಾಗಿ ಅವನನ್ನ ಕೊಲ್ಲಲಾಯ್ತು.*+
9 ಅವನು ತಪ್ಪೇ* ಮಾಡಲಿಲ್ಲ,ಅವನ ಬಾಯಲ್ಲಿ ವಂಚನೆಯ ಮಾತುಗಳೇ ಬರಲಿಲ್ಲ.+
ಹಾಗಿದ್ರೂ ಕೆಟ್ಟವ್ರನ್ನ ಸಮಾಧಿ ಮಾಡೋ ಸ್ಥಳದಲ್ಲಿ ಅವನಿಗೆ ಸಮಾಧಿ ಮಾಡಲಾಯ್ತು.*+
ಆದ್ರೆ ಅವನು ತೀರಿಹೋದಾಗ ಅವನನ್ನ ಶ್ರೀಮಂತರ ಜೊತೆ* ಸಮಾಧಿ ಮಾಡಲಾಯ್ತು.+
10 ಆದ್ರೆ ಅವನನ್ನ ಜಜ್ಜೋದು ಯೆಹೋವನ ತೀರ್ಮಾನವಾಗಿತ್ತು.* ಅದಕ್ಕೇ ಅವನು ನೋವಿಂದ ನರಳೋ ತರ ಆತನು ಅನುಮತಿಸಿದನು.
ದೇವರೇ, ನೀನು ಅವನ ಪ್ರಾಣವನ್ನ ದೋಷಪರಿಹಾರಕ ಬಲಿಯಾಗಿ ಅರ್ಪಿಸಿದ್ರೆ,+ಅವನು ತನ್ನ ಸಂತತಿಯನ್ನ ನೋಡ್ತಾನೆ, ಅವನು ತುಂಬ ಕಾಲ ಬದುಕ್ತಾನೆ,+ಅವನ ಮೂಲಕ ಯೆಹೋವನ ಉದ್ದೇಶ ನೆರವೇರುತ್ತೆ.+
11 ತಾನು ಅನುಭವಿಸಿದ ಕಡುಸಂಕಟದ ಫಲಿತಾಂಶ ಕಂಡು ಅವನು ತೃಪ್ತನಾಗ್ತಾನೆ.
ನೀತಿವಂತನಾಗಿರೋ ನನ್ನ ಸೇವಕ+ ತನ್ನ ಜ್ಞಾನದ ಮೂಲಕ,ಅನೇಕ ಜನ್ರನ್ನ ನೀತಿವಂತರು ಅಂತ ಎಣಿಸೋಕೆ ನೆರವಾಗ್ತಾನೆ,+ಅವ್ರ ಪಾಪಗಳನ್ನ ತನ್ನ ಮೇಲೆ ಹೊತ್ಕೊಳ್ತಾನೆ.+
12 ಹಾಗಾಗಿ ನಾನು ಅವನಿಗೆ ತುಂಬ ಜನ್ರ ಜೊತೆ ಪಾಲು ಕೊಡ್ತೀನಿ,ಅವನು ಬಲಿಷ್ಠರ ಜೊತೆ ಕೊಳ್ಳೆಯನ್ನ ಹಂಚ್ಕೊಳ್ತಾನೆ,ಯಾಕಂದ್ರೆ ಅವನು ತನ್ನ ಪ್ರಾಣವನ್ನೇ ಧಾರೆಯೆರೆದು ಮರಣವನ್ನ ಅನುಭವಿಸಿದನು,+ಅಪರಾಧಿಗಳಲ್ಲಿ ಒಬ್ಬನ ಹಾಗೆ ಅವನನ್ನೂ ಎಣಿಸಲಾಯ್ತು,+ಅವನು ಅನೇಕರ ಪಾಪ ಹೊತ್ಕೊಂಡನು,+ಅಪರಾಧಿಗಳಿಗಾಗಿ ಅವನು ಮಧ್ಯಸ್ತಿಕೆ ವಹಿಸಿದನು.*+
ಪಾದಟಿಪ್ಪಣಿ
^ ಬಹುಶಃ, “ನಾವು ಕೇಳಿಸ್ಕೊಂಡಿರೋದ್ರ ಮೇಲೆ.”
^ ಅಕ್ಷ. “ಬಾಹುವನ್ನ.”
^ ಇಲ್ಲಿ “ಅವನ” ಅನ್ನೋದು ಎಲ್ಲವನ್ನ ಗಮನಿಸೋ ವ್ಯಕ್ತಿಗೆ ಅಥವಾ ದೇವರಿಗೆ ಸೂಚಿಸುತ್ತೆ.
^ ಅಥವಾ “ನಾವು ಅವನಿಗಾಗಿ ಆಸೆಪಡುವಂಥ ವಿಶೇಷವಾದ ರೂಪ ಅವನಿಗಿಲ್ಲ.”
^ ಅಕ್ಷ. “ಅವನ ಮುಖ ನಮ್ಮಿಂದ ಮರೆಯಾಗಿದೆ ಏನೋ ಅನ್ನೋ ತರ ಇತ್ತು.”
^ ಅಕ್ಷ. “ಅವನನ್ನ ತೆಗೆಯಲಾಯ್ತು.”
^ ಅಕ್ಷ. “ಜೀವಂತವಾಗಿರುವವರ ದೇಶದಿಂದ.”
^ ಅಕ್ಷ. “ಅವನು ಹೊಡೆತ ತಿಂದನು.”
^ ಅಕ್ಷ. “ಒಬ್ಬ ಶ್ರೀಮಂತನ ಜೊತೆ.”
^ ಅಥವಾ “ಒಬ್ಬ ಅವನಿಗೆ ತನ್ನ ಸಮಾಧಿ ಕೊಟ್ಟ.”
^ ಅಥವಾ “ಹಿಂಸೆಯನ್ನೇ.”
^ ಅಥವಾ “ಯೆಹೋವನ ಸಂತೋಷವಾಗಿತ್ತು.”
^ ಅಥವಾ “ಅಪರಾಧಿಗಳ ಪರವಾಗಿ ಬಿನ್ನಹ ಮಾಡ್ಕೊಂಡನು.”