ಸದಾ ಎಚ್ಚರವಾಗಿರಿ!
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್—ಒಳ್ಳೇದಾ ಅಥವಾ ಕೆಟ್ಟದ್ದಾ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಇತ್ತೀಚಿಗೆ ಲೋಕದ ನಾಯಕರು, ವಿಜ್ಞಾನಿಗಳು, ಮತ್ತು ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ಗೊತ್ತಿರೋರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಗ್ಗೆ ಹೊಗಳಿ ಮಾತಾಡ್ತಿದ್ದಾರೆ. ಆದ್ರೆ ಅದೇ ಸಮಯದಲ್ಲಿ ಇದ್ರಿಂದ ಉಪಯೋಗ ಮಾತ್ರವಲ್ಲ ದುರುಪಯೋಗ ಆಗೋ ಸಾಧ್ಯತೆನೂ ಇದೆ ಅಂತ ಅರ್ಥಮಾಡ್ಕೊಂಡಿದ್ದಾರೆ.
“ಎಐ ಇವತ್ತಿನ ಅತ್ಯಂತ ಶಕ್ತಿಶಾಲಿ ತಂತ್ರಜ್ಞಾನಗಳಲ್ಲಿ ಒಂದು ಮತ್ತು ಜನರ ಜೀವನವನ್ನ ಸುಧಾರಿಸುವ ಸಾಮರ್ಥ್ಯ ಇದಕ್ಕಿದೆ . . . ಅಲ್ಲದೇ, ಎಐಗೆ ನಮ್ಮ ಸುರಕ್ಷತೆಗೆ ಮತ್ತು ಭದ್ರತೆಗೆ ಬೆದರಿಕೆ ಹಾಕೋ ಸಾಮರ್ಥ್ಯನೂ ಇದೆ. ಇದಕ್ಕೆ ನಮ್ಮ ಹಕ್ಕುಗಳನ್ನ ಮುರಿಯೋ ಮತ್ತು ಸರ್ಕಾರದ ಮೇಲೆ ನಂಬಿಕೆ ಕಳ್ಕೊಳ್ಳುವಂತೆ ಮಾಡೋ ಶಕ್ತಿನೂ ಇದೆ.”— ಕಮಲಾ ಹ್ಯಾರಿಸ್, ಅಮೆರಿಕದ ಉಪಾಧ್ಯಕ್ಷೆ, ಮೇ 4, 2023.
ಇದ್ರ ಬಗ್ಗೆ ಡಾ. ಫ್ರೆಡೆರಿಕ್ ಫೆಡರ್ಸ್ಪೈಲ್ರವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ವೈದ್ಯರು ಮತ್ತು ಆರೋಗ್ಯ ತಜ್ಞರ ತಂಡ ಹೀಗೆ ಹೇಳಿತು, “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದ (ಎಐ) ವೈದ್ಯಕೀಯ ಕ್ಷೇತ್ರದಲ್ಲಿ ತುಂಬ ಸಾಧನೆ ಮಾಡಬಹುದು, ಅಷ್ಟೇ ಅಲ್ಲ ಇದಕ್ಕೆ ಮನುಷ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಾನಿ ಮಾಡುವ ಶಕ್ತಿನೂ ಇದೆ.” ಇದನ್ನ ಮೇ 9, 2023ರಂದು ಬಿಎಮ್ಜೆ ಗ್ಲೋಬಲ್ ಹೆಲ್ತ್ ಲೇಖನದಲ್ಲಿ ಪ್ರಕಾಶಿಸಲಾಗಿದೆ. a
“ಎಐನಿಂದ ಈಗಾಗಲೇ ತಪ್ಪು ಮಾಹಿತಿಗಳು ಹರಡ್ತಿದೆ. ಹೋಗ್ತಾ ಹೋಗ್ತಾ ಇದ್ರಿಂದ ತುಂಬ ಜನ ಕೆಲಸನೂ ಕಳ್ಕೊಬಹುದು. ಅಷ್ಚೇ ಅಲ್ಲ ಎಐನಿಂದ ಮುಂದೆ ಮನುಷ್ಯರು ಎಷ್ಟರ ಮಟ್ಟಿಗೆ ಕೆಟ್ಟುಹೋಗ್ತಾರೆ ಅಂದ್ರೆ ಮನುಷ್ಯತ್ವನೇ ಕಳ್ಕೊಂಡು ಬಿಡ್ತಾರೇನೊ ಅಂತ ಆನೇಕ ತಂತ್ರಜ್ಞಾನಿಗಳಿಗೆ ಚಿಂತೆ ಆಗ್ತಿದೆ.”—ದಿ ನ್ಯೂಯಾರ್ಕ್ ಟೈಮ್ಸ್, ಮೇ 1, 2023.
ಎಐ ನಿಜವಾಗ್ಲೂ ಒಳ್ಳೇದಾ ಅಥವಾ ಕೆಟ್ಟದ್ದಾ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತೆ. ಆದ್ರೆ ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಮನುಷ್ಯರು ಮಾಡೋದನ್ನ ನಂಬೋಕೆ ಯಾಕೆ ಕಷ್ಟ ಆಗುತ್ತೆ?
ತಂತ್ರಜ್ಞಾನದಿಂದ ಯಾವಾಗ್ಲೂ ಒಳ್ಳೇದಾಗುತ್ತೆ ಅನ್ನೋ ಗ್ಯಾರಂಟಿ ಕೊಡೋಕೆ ಆಗಲ್ಲ ಅಂತ ಬೈಬಲ್ ಹೇಳುತ್ತೆ.
1. ಒಂದು ವಿಷ್ಯನ ಒಳ್ಳೆ ಉದ್ದೇಶದಿಂದ ಮಾಡಿದ್ರೂ ಅದ್ರಿಂದ ಮುಂದೆ ಏನಾದ್ರೂ ಹಾನಿ ಆಗುತ್ತಾ ಅಂತ ಮನುಷ್ಯರು ಯೋಚಿಸೋದಿಲ್ಲ.
“ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ, ಆದ್ರೆ ಅದು ಸಾವಲ್ಲಿ ಕೊನೆ ಆಗುತ್ತೆ.”—ಜ್ಞಾನೋಕ್ತಿ 14:12.
2. ಒಬ್ಬ ವ್ಯಕ್ತಿ ಮಾಡಿರೋ ಸಾಧನವನ್ನ ಇನ್ನೊಬ್ಬ ಒಳ್ಳೇದಕ್ಕೆ ಬಳಸ್ತಾನ ಅಥವಾ ಕೆಟ್ಟದ್ದಕ್ಕೆ ಬಳಸ್ತಾನ ಅಂತ ಹೇಳೋಕೆ ಆಗಲ್ಲ.
“ನಾನು ಸತ್ತ ಮೇಲೆ ಅದೆಲ್ಲ ನನ್ನ ನಂತ್ರ ಬರುವವನ ಪಾಲಾಗುತ್ತೆ. ಅವನು ವಿವೇಕಿಯೋ ಮೂರ್ಖನೋ ಯಾರಿಗೆ ಗೊತ್ತು? ಅವನು ಹೇಗೇ ಇದ್ರೂ ನಾನು ಇಷ್ಟು ಕಷ್ಟಪಟ್ಟು ವಿವೇಕದಿಂದ ಮಾಡಿದ್ದೆಲ್ಲ ಅವನ ಕೈಗೆ ಸೇರುತ್ತೆ. ಇದು ಕೂಡ ವ್ಯರ್ಥ.”—ಪ್ರಸಂಗಿ 2:18, 19.
ಈ ಮೇಲಿನ ಕಾರಣಗಳು ನಮಗೆ ಸೃಷ್ಟಿಕರ್ತನ ಸಹಾಯ ಬೇಕೇ ಬೇಕು ಅಂತ ತೋರಿಸಿ ಕೊಡುತ್ತೆ.
ನಾವು ಯಾರನ್ನ ನಂಬಬಹುದು?
ಮನುಷ್ಯರು ಅಥವಾ ಅವರ ಸಾಧನೆಗಳು ಈ ಭೂಮಿನ ಮತ್ತು ಮಾನವ ಕುಲವನ್ನ ನಾಶ ಮಾಡೋಕೆ ನಾನು ಬಿಡಲ್ಲ ಅಂತ ನಮ್ಮ ಸೃಷ್ಟಿಕರ್ತ ಮಾತು ಕೊಟ್ಟಿದ್ದಾನೆ.
“ಭೂಮಿ ಶಾಶ್ವತವಾಗಿ ಇರುತ್ತೆ.”—ಪ್ರಸಂಗಿ 1:4.
“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29.
ಬೈಬಲಿನ ಮೂಲಕ ಶಾಶ್ವತವಾದ ಶಾಂತಿ ಮತ್ತು ಭದ್ರತೆ ಪಡ್ಕೊಳ್ಳೋಕೆ ಸೃಷ್ಟಿಕರ್ತ ನಮ್ಮನ್ನ ಮಾರ್ಗದರ್ಶಿಸ್ತಾನೆ. ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿಯೋಕೆ “ಸುಭದ್ರ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ಇದೆಯಾ?” ಮತ್ತು “ಸಂತೋಷದ ಜೀವನಮಾರ್ಗ—ನಿರೀಕ್ಷೆ” ಅನ್ನೋ ಲೇಖನಗಳನ್ನ ನೋಡಿ.
a “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದ ಮಾನವ ಆರೋಗ್ಯಕ್ಕೆ ಮತ್ತು ಆಸ್ಥಿತ್ವಕ್ಕೆ ಇರುವ ಬೆದರಿಕೆಗಳು,” ಅನ್ನೋ ಲೇಖನವನ್ನ ಫ್ರೆಡೆರಿಕ್ ಫೆಡರ್ಸ್ಪೈಲ್, ರೂತ್ ಮಿಚೆಲ್, ಆಶಾ ಅಶೋಕನ್, ಕಾರ್ಲೋಸ್ ಉಮಾನ, ಮತ್ತು ಡೇವಿಡ್ ಮೆಕಾಯ್ ಬರೆದಿದ್ದಾರೆ.