ಸದಾ ಎಚ್ಚರವಾಗಿರಿ!
ಜನ್ರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಕಮ್ಮಿ ಆಗ್ತಿದೆ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
2024ರಲ್ಲಿ ಲೋಕದ ಎಲ್ಲಾ ಕಡೆ ತುಂಬ ಚುನಾವಣೆಗಳು ನಡೀಲಿಕ್ಕಿದೆ. ಇತಿಹಾಸ ನೋಡೋದಾದ್ರೆ ಒಂದು ವರ್ಷದಲ್ಲಿ ಇಷ್ಟು ಚುನಾವಣೆಗಳು ನಡೆದೇ ಇಲ್ಲ. ಆದ್ರೆ ಎಷ್ಟೊಂದು ಜನ ರಾಜಕಾರಣಿಗಳ ಮೇಲೆ ನಂಬಿಕೆ ಕಳ್ಕೊಳ್ತಿದ್ದಾರೆ.
ಅಮೆರಿಕಾದ ಒಂದು ಸರ್ವೇ ಹೇಳೋ ಪ್ರಕಾರ, ಎಷ್ಟೋ ರಾಜಕಾರಣಿಗಳು ಜನ್ರಿಗೆ ಸೇವೆ ಮಾಡೋಕಲ್ಲ, “ತಮ್ಮ ಸ್ವಾರ್ಥ ಆಸೆಗಳಿಗೋಸ್ಕರ ರಾಜಕೀಯಕ್ಕೆ ಕಾಲಿಡ್ತಿದ್ದಾರೆ.” a—ಪ್ಯೂ ರಿಸರ್ಚ್ ಸೆಂಟರ್, ಸೆಪ್ಟೆಂಬರ್ 19, 2023.
ಯುವಜನ್ರಿಗೂ ರಾಜಕಾರಣಿಗಳ ಮೇಲೆ ನಂಬಿಕೆ ಕಮ್ಮಿ ಆಗ್ತಿದೆ.
“ಇವತ್ತು ಯುವಜನ್ರಿಗೆ, ಜನರಿಗಿರೋ ಸಮಸ್ಯೆಗಳಿಗೆ ಪರಿಹಾರ ಹುಡುಕೋದು ಮುಖ್ಯ. ಆದ್ರೆ ರಾಜಕಾರಣಿಗಳು ಆ ಪರಿಹಾರದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತ ಯುವಜನ್ರು ಸರ್ವೇಗಳಲ್ಲಿ ಹೇಳಿದ್ದಾರೆ.”—ದಿ ನ್ಯೂಯಾರ್ಕ್ ಟೈಮ್ಸ್, ಜನವರಿ 29, 2024.
“ಒಂದು ಸಮೀಕ್ಷೆಯ ಪ್ರಕಾರ ಇವತ್ತು ಯುವಜನ್ರಿಗೆ ರಾಜಕಾರಣಿಗಳಿಗಿಂತ ಯೂಟ್ಯೂಬರ್ಸ್ ಮೇಲೆ ನಂಬಿಕೆ ಜಾಸ್ತಿ ಇದೆ.”—ದಿ ಕೊರಿಯಾ ಟೈಮ್ಸ್, ಜನವರಿ 22, 2024.
ರಾಜಕಾರಣಿಗಳು ನಮಗೆ ಒಳ್ಳೇದು ಮಾಡ್ತಾರೆ ಅಂತ ನಾವು ನಂಬಬಹುದಾ? ನಾವು ಯಾರ ಮೇಲೆ ನಂಬಿಕೆ ಇಡಬಹುದು?
ಹುಷಾರಾಗಿ ನಂಬಿ
ನಾವು ಯಾರನ್ನಾದ್ರೂ ನಂಬೋಕೂ ಮುಂಚೆ ಹುಷಾರಾಗಿರಬೇಕು. ಅದಕ್ಕೆ ಬೈಬಲ್ ಹೀಗೆ ಹೇಳುತ್ತೆ: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.
ನಮಗೆ ಬರೋ ಮಾಹಿತಿ ಸರಿಯಿದೆಯಾ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುವ ಸಲಹೆಗಳು“ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ” ಅನ್ನೋ ಲೇಖನದಲ್ಲಿದೆ.
ಕೆಲವು ರಾಜಕಾರಣಿಗಳು ಪ್ರಾಮಾಣಿಕರಾಗಿದ್ದಾರೆ, ಜನರಿಗೆ ಒಳ್ಳೇದು ಮಾಡಬೇಕು ಅಂತ ಅಂದ್ಕೊಂಡಿದ್ದಾರೆ. ಆದ್ರೆ ಅವರ ಕೈಲಿ ಅದನ್ನ ಮಾಡೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಬೈಬಲ್ ಹೀಗೆ ಎಚ್ಚರಿಕೆ ಕೊಡುತ್ತೆ:
“ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ.”—ಕೀರ್ತನೆ 146:3.
ನೀವು ನಂಬಬಹುದಾದ ನಾಯಕ
ದೇವರು ಒಬ್ಬ ಸಮರ್ಥ ಹಾಗೂ ನಂಬಬಹುದಾದ ಒಬ್ಬ ನಾಯಕನನ್ನ ಆರಿಸಿದ್ದಾನೆ ಅಂತ ಬೈಬಲ್ ಹೇಳುತ್ತೆ. ಅದು ಬೇರೆ ಯಾರೂ ಅಲ್ಲ ಯೇಸು ಕ್ರಿಸ್ತನೇ. (ಲೂಕ 1:32, 33) ಯೇಸು ದೇವರ ಸರ್ಕಾರದ ರಾಜನಾಗಿದ್ದಾನೆ, ಆ ಸರ್ಕಾರ ಸ್ವರ್ಗದಿಂದ ಆಳ್ವಿಕೆ ಮಾಡುತ್ತೆ.—ಮತ್ತಾಯ 6:10.
ಯೇಸುನಾ ನಾವು ಯಾಕೆ ನಂಬಬಹುದು ಮತ್ತು ಆತನು ನಮಗಿರೋ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕೋಕೆ ಏನೆಲ್ಲಾ ಮಾಡ್ತಾನೆ ಅಂತ ತಿಳ್ಕೊಳ್ಳೋಕೆ “ದೇವರ ಸರ್ಕಾರದ ನಾಯಕ ಯಾರು?” ಮತ್ತು “ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?” ಅನ್ನೋ ಲೇಖನಗಳನ್ನ ನೋಡಿ.
a Pew Research Center, “Americans’ Dismal Views of the Nation’s Politics,” September 2023.