ನಮ್ಮ ಕ್ರೈಸ್ತ ಜೀವನ
ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ
ಮಕ್ಕಳು ಯೆಹೋವನ ಕಣ್ಮಣಿಗಳು. ಅವರು ಮಾಡೋ ಸೇವೆ ಮತ್ತು ತ್ಯಾಗಗಳನ್ನ ಆತನು ತುಂಬ ಮೆಚ್ಚಿಕೊಳ್ತಾನೆ. (1ಸಮು 2:26; ಲೂಕ 2:52) ಚಿಕ್ಕ ಮಕ್ಕಳು ಕೂಡ ಯೆಹೋವನ ಮನಸ್ಸನ್ನ ಖುಷಿಪಡಿಸಬಹುದು. (ಜ್ಞಾನೋ 27:11) ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಬೇಕಾದ ವಿಷ್ಯಗಳನ್ನ ಯೆಹೋವ ಹೆತ್ತವರಿಗೆ ತನ್ನ ಸಂಘಟನೆ ಮೂಲಕ ಕೊಡ್ತಾ ಬಂದಿದ್ದಾನೆ. ಇದ್ರಿಂದ ಮಕ್ಕಳು ಯೆಹೋವನ ಮಾತು ಕೇಳೋಕೆ ಮತ್ತು ಆತನನ್ನ ಪ್ರೀತಿಸೋಕೆ ಸುಲಭ ಆಗ್ತಿದೆ.
“ಮಕ್ಕಳೇ—ನಿಮ್ಮ ತಾಳ್ಮೆ ಯೆಹೋವನಿಗೆ ಖುಷಿ ತರುತ್ತದೆ!” ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಎಷ್ಟೋ ವರ್ಷಗಳಿಂದ ಮಕ್ಕಳಿಗೆ ಯೆಹೋವ ಹೇಗೆಲ್ಲಾ ಸಹಾಯ ಮಾಡ್ತಾ ಬಂದಿದ್ದಾನೆ?
-
ಮಕ್ಕಳನ್ನ ಬೆಳೆಸೋಕೆ ಹೆತ್ತವರಿಗೆ ಯಾವ ಸಹಾಯ ಸಿಗ್ತಿದೆ?
-
ಮಕ್ಕಳೇ ಯೆಹೋವ ಕೊಟ್ಟಿರೋ ಯಾವ ಗಿಫ್ಟ್ ನಿಮಗಿಷ್ಟ ಮತ್ತು ಯಾಕೆ?